×
Ad

ಮೋದಿ- ಟ್ರಂಪ್ ಸದಾ ಸ್ನೇಹಿತರು: ವಿದೇಶಾಂಗ ಸಚಿವಾಲಯ

Update: 2025-09-07 07:01 IST

ಅಧ್ಯಕ್ಷ ಡೊನಾಲ್ಡ್ , ನರೇಂದ್ರ ಮೋದಿ | PTI

ಹೊಸದಿಲ್ಲಿ: ಭಾರತ ಹಾಗೂ ಅಮೆರಿಕ ನಡುವಿನ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷರ ಧನಾತ್ಮಕ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ ಬೆನ್ನಲ್ಲೇ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿ ಉಭಯ ದೇಶಗಳ ಮುಖಂಡರು ವೈಯಕ್ತಿಕವಾಗಿ ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದೆ.

20 ವರ್ಷ ಹಳೆಯ ದ್ವಿಪಕ್ಷೀಯ ಸಂಬಂಧದಲ್ಲಿ ಸೃಷ್ಟಿಯಾಗಿರುವ ಋಣಾತ್ಮಕ ಅಲೆಯನ್ನು ಉತ್ತಮ ಸಂಬಂಧವಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಈ ಸ್ನೇಹ ಸಂಬಂಧವನ್ನು ಉಭಯ ಮುಖಂಡರು ಬಳಸಿಕೊಳ್ಳಲಿದ್ದಾರೆ ಎಂದು ಹೇಳಿದೆ.

"ಮೋದಿಯವರು ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಅತ್ಯಂತ ಮಹತ್ವ ನೀಡುತ್ತಾರೆ ಹಾಗೂ ಟ್ರಂಪ್ ಜತೆಗೆ ಅತ್ಯುತ್ತಮ ವೈಯಕ್ತಿಕ ಸಮೀಕರಣ ಹೊಂದಿದ್ದಾರೆ. ಆದರೆ ಅಮೆರಿಕ ಜತೆ ನಾವು ಮಾತುಕತೆಯಲ್ಲಿ ತೊಡಗಿರುವ ಸಂದರ್ಭದಲ್ಲಿ, ಇದಕ್ಕಿಂತ ಹೆಚ್ಚಿನ ಏನನ್ನೂ ಹೇಳುವಂತಿಲ್ಲ. ಆದರೆ ನಾವು ಇಷ್ಟನ್ನು ಮಾತ್ರ ಸ್ಪಷ್ಟಪಡಿಸಬಹುದು" ಎಂದು ಜೈಶಂಕರ್ ವಿವರಿಸಿದ್ದಾರೆ.

ವಿಶ್ವಸಂಸ್ಥೆಯ 80ನೇ ಸಾಮಾನ್ಯ ಮಹಾಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಜೈಶಂರ್ ಈ ತಿಂಗಳು ನ್ಯೂಯಾರ್ಕ್‍ಗೆ ಭೇಟಿ ನೀಡುತ್ತಿದ್ದಾರೆ.

ಈ ಬೆಳವಣಿಗೆಗಳ ಬೆನ್ನಲ್ಲೇ ಉಭಯ ಮುಖಂಡರ ನಡುವೆ ದೂರವಾಣಿ ಸಂಭಾಷಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಆದರೆ ರಾಜತಾಂತ್ರಿಕ ಮೂಲಗಳು ಇದನ್ನು ಇನ್ನೂ ದೃಢಪಡಿಸಿಲ್ಲ. ಉಭಯ ದೇಶಗಳ ನಡುವಿನ ಪಾಲುದಾರಿಕೆ ಉಳಿಸಿಕೊಳ್ಳುವ ಬದ್ಧತೆ ವಿಚಾರದಲ್ಲಿ ವಿಶ್ವಸಂಸ್ಥೆ ಮಹಾಧಿವೇಶನ ಸಂದರ್ಭದಲ್ಲಿ ಮಾತುಕತೆ ನಡೆಯುವ ಸಾಧ್ಯತೆಯೂ ಇದೆ. ಆದರೆ ಈ ಸಭೆಯಲ್ಲಿ ಭಾರತದ ನಿಯೋಗದ ಪರವಾಗಿ ಜೈಶಂಕರ್ ಮಾತನಾಡುವರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News