×
Ad

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಾಜಿ ಕ್ರಿಕೆಟಿಗ ಅಝರುದ್ದೀನ್ ಗೆ ಈಡಿ ಸಮನ್ಸ್

Update: 2024-10-03 12:09 IST

ಮುಹಮ್ಮದ್ ಅಝರುದ್ದೀನ್ (Photo: PTI)

ಹೊಸದಿಲ್ಲಿ: ಹೈದರಾಬಾದ್ ಕ್ರಿಕೆಟ್ ಒಕ್ಕೂಟಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗ ಮತ್ತು ಕಾಂಗ್ರೆಸ್‌ ನಾಯಕ ಮುಹಮ್ಮದ್ ಅಝರುದ್ದೀನ್ ಅವರಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿಗೊಳಿಸಿದೆ.

ಹೈದರಾಬಾದ್ ಕ್ರಿಕೆಟ್ ಒಕ್ಕೂಟದ ಅಧ್ಯಕ್ಷರಾಗಿದ್ದ ಮುಹಮ್ಮದ್ ಅಝರುದ್ದೀನ್, ತಮ್ಮ ಆಡಳಿತಾವಧಿಯಲ್ಲಿ ನಿಧಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಕಾಂಗ್ರೆಸ್ ನಾಯಕರಾದ ಮುಹಮ್ಮದ್ ಅಝರುದ್ಧೀನ್ ಅವರಿಗೆ ಜಾರಿಯಾಗಿರುವ ಪ್ರಥಮ ಸಮನ್ಸ್ ಇದಾಗಿದ್ದು, ಇಂದು ಅವರು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News