ಇಸ್ರೋದ ಎಲ್‌ಪಿಎಸ್‌ಸಿ ನಿರ್ದೇಶಕರಾಗಿ ಮೋಹನ್ ನೇಮಕ
Update: 2025-01-26 21:04 IST
ಎಂ. ಮೋಹನ್ | PC : X
ತಿರುವನಂತಪುರ : ಹಿರಿಯ ವಿಜ್ಞಾನಿ ಹಾಗೂ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ (ವಿಎಸ್‌ಎಸ್‌ಸಿ)ದ ಯೋಜನಾ ನಿರ್ದೇಶಕ ಎಂ. ಮೋಹನ್ ಇಸ್ರೋದ ಪ್ರಮುಖ ಅಂಗ ಸಂಸ್ಥೆ ‘ಲಿಕ್ವಿಡ್ ಪ್ರೊಪೆಲ್ಶನ್ ಸಿಸ್ಟಮ್ ಸೆಂಟರ್’ (ಎಲ್‌ಪಿಎಸ್‌ಸಿ)ನ ನೂತನ ನಿರ್ದೇಶರಾಗಿ ನೇಮಕರಾಗಿದ್ದಾರೆ.
ಕೇಂದ್ರ ಸರಕಾರ ಎಲ್‌ಸಿಎಸ್‌ಪಿ ನಿರ್ದೇಶಕರಾಗಿರುವ ಸಿ. ನಾರಾಯಣನ್ ಅವರನ್ನು ಇಸ್ರೋದ ಮುಖ್ಯಸ್ಥರಾಗಿ ನೇಮಕ ಮಾಡಿತ್ತು. ಆದುದರಿಂದ ಈ ಸ್ಥಾನ ತೆರವಾಗಿತ್ತು.
ಆಲಪ್ಪುಳ ಮೂಲದವರಾದ ಮೋಹನ್ ಈ ಹಿಂದೆ 2023 ಜೂನ್‌ನಿಂದ 2024 ಜೂನ್ ವರೆಗೆ ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಕೇರಳದ ತಿರುವನಂತಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಲ್‌ಪಿಎಸ್‌ಸಿ ಇಸ್ರೋದ ರಾಕೆಟ್‌ಗಳಿಗೆ ಮತ್ತು ಬಾಹ್ಯಾಕಾಶ ನೌಕೆಗಳಿಗೆ ಬೇಕಾದ ಪ್ರೊಪೆಲ್ಶನ್ ಸಲಕರಣೆಗಳ ಅಭಿವೃದ್ಧಿ ಹಾಗೂ ಸಂಶೋಧನೆ ನಡೆಸುತ್ತದೆ.