×
Ad

ತನ್ನ ಮತ್ತು ಮಾಜಿ ಗೆಳೆಯನ ಮೇಲೆ ಮೊಯಿತ್ರಾ ಕಣ್ಗಾವಲು : ಸಿಬಿಐಗೆ ವಕೀಲ ದೇಹದ್ರಾಯ್ ದೂರು

Update: 2024-01-03 21:51 IST

ಮಹುವಾ ಮೊಯಿತ್ರಾ | Photo: PTI 

ಹೊಸದಿಲ್ಲಿ: ತನ್ನ ಮೇಲೆ ಕಣ್ಗಾವಲು ಇರಿಸಿದ್ದಕ್ಕಾಗಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ವಿರುದ್ಧ ಸಿಬಿಐಗೆ ದೂರು ಸಲ್ಲಿಸಿರುವ ವಕೀಲ ಜೈ ದೇಹದ್ರಾಯ್ ಅವರು, ಮೊಯಿತ್ರಾ ತನ್ನ ದೂರವಾಣಿ ಸಂಖ್ಯೆಯನ್ನು ಬಳಸಿಕೊಂಡು ತಾನು ಇರುವ ಸ್ಥಳದ ಜಾಡು ಹಿಡಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿಬಿಐಗೆ ದೂರು ಸಲ್ಲಿಸಿದ್ದನ್ನು ಬುಧವಾರ ಸುದ್ದಿಸಂಸ್ಥೆಗೆ ಖಚಿತಪಡಿಸಿದ ದೇಹದ್ರಾಯ್, ಇದು ಗಂಭೀರ ವಿಷಯವಾಗಿದೆ. ಒಡಿಶಾದ ಕೆಲವರು ಮೊಯಿತ್ರಾರಿಗೆ ಹಣಕಾಸು ಮತ್ತು ಬೆಂಬಲವನ್ನು ಒದಗಿಸುತ್ತಿದ್ದಾರೆ. ಈ ಹೋರಾಟವು ಅತ್ಯಂತ ಅಪಾಯಕಾರಿಯಾಗಿದೆ. ಆದರೆ ತಾನು ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

ತನ್ನ ಮಾಜಿ ಗೆಳೆಯ ಸುಹಾನ್ ಮುಖರ್ಜಿ ಜರ್ಮನ್ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯಿಂದ ಮೊಯಿತ್ರಾ ಬಂಗಾಳದ ಹಿರಿಯ ಪೋಲಿಸ್ ಅಧಿಕಾರಿಗಳ ನೆರವಿನಿಂದ ಅತನ ಕರೆ ವಿವರಗಳ ದಾಖಲೆಗಳನ್ನು ಅಕ್ರಮವಾಗಿ ಪಡೆದುಕೊಂಡಿದ್ದರು. ಈ ವಿಷಯವನ್ನು ಮೊಯಿತ್ರಾ ಹಲವಾರು ಸಂದರ್ಭಗಳಲ್ಲಿ ತನಗೆ ತಿಳಿಸಿದ್ದರು ಎಂದು ದೇಹದ್ರಾಯ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಹಲವಾರು ಬರಿ ಮೊಯಿತ್ರಾ ತನಗೆ ಬೆದರಿಕೆಗಳನ್ನು ಒಡ್ಡಿದ್ದರು. ದಿಲ್ಲಿಯಲ್ಲಿನ ತನ್ನ ನಿವಾಸದ ಹೊರಗೆ ತನ್ನ ಕಾರನ್ನು ಹಿಂಬಾಲಿಸಲಾಗುತ್ತಿದೆ ಎಂದು ಹಲವಾರು ಸಂದರ್ಭಗಳಲ್ಲಿ ತಾನು ಭಾವಿಸಿದ್ದೆ ಎಂದೂ ದೇಹದ್ರಾಯ್ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News