×
Ad

2021ರಲ್ಲಿ ಕೋವಿಡ್ ನಿಂದಾಗಿ 25.8 ಲಕ್ಷಕ್ಕಿಂತಲೂ ಹೆಚ್ಚು ಜನರು ಮೃತ್ಯು: ಅಧಿಕೃತ ವರದಿ

Update: 2025-05-09 20:48 IST

ಸಾಂದರ್ಭಿಕ ಚಿತ್ರ | PC : freepik.com

ಹೊಸದಿಲ್ಲಿ: 2019ಕ್ಕೆ ಹೋಲಿಸಿದರೆ 2021ರಲ್ಲಿ ಭಾರತದಲ್ಲಿ ಕೋವಿಡ್ ನಿಂದಾಗಿ ಸುಮಾರು 25.8 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಬುಧವಾರ ಬಿಡುಗಡೆಯಾಗಿರುವ ನಾಗರಿಕ ನೋಂದಣಿ ವ್ಯವಸ್ಥೆ ಅಧಾರಿತ ಅಧಿಕೃತ ದತ್ತಾಂಶದಿಂದ ತಿಳಿದು ಬಂದಿದೆ.

ಅತ್ಯಧಿಕ ಪ್ರಮಾಣದ ಮರಣ ಸಂಖ್ಯೆಯು ಗುಜರಾತ್ ನಲ್ಲಿ ಕಂಡು ಬಂದಿದ್ದು, ಈ ರಾಜ್ಯದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಜನರು ಮೃತಪಟ್ಟಿದ್ದಾರೆ. 2021ರಲ್ಲಿ ಕೇವಲ 5,800 ಜನರು ಮೃತಪಟ್ಟಿದ್ದಾರೆ ಎಂದು ರಾಜ್ಯವು ಅಧಿಕೃತವಾಗಿ ಕೋವಿಡ್ ಮರಣ ಕುರಿತ ಅಂಕಿ ಅಂಶದಲ್ಲಿ ಹೇಳಿತ್ತು. ಆದರೆ ಈಗ ಬಿಡುಗಡೆಯಾದ ವರದಿಯಲ್ಲಿ ಮರಣ ಪ್ರಮಾಣ 33 ಪಟ್ಟಿಗಿಂತ ಅಧಿಕ ಎಂಬ ವಿಚಾರ ಬಯಲಾಗಿದೆ.

ಮಧ್ಯಪ್ರದೇಶದಲ್ಲಿನ ಅಧಿಕೃತ ಕೋವಿಡ್ ಮರಣ ಪ್ರಮಾಣಕ್ಕಿಂತ 18 ಪಟ್ಟು ಅಧಿಕ ಸಾವುಗಳು ಸಂಭವಿಸಿದ್ದರೆ, ಪಶ್ಚಿಮ ಬಂಗಾಳದಲ್ಲಿ 15 ಪಟ್ಟು ಅಧಿಕ ಪ್ರಮಾಣದ ಸಾವುಗಳು ಸಂಭವಿಸಿವೆ.ಬಿಹಾರ, ರಾಜಸ್ಥಾನ, ಜಾರ್ಖಂಡ್ ಹಾಗೂ ಆಂಧ್ರಪ್ರದೇಶದಲ್ಲೂ ಕೂಡಾ ಅಧಿಕೃತ ಕೋವಿಡ್ ಮರಣ ಪ್ರಮಾಣಕ್ಕಿಂತ 10 ಪಟ್ಟು ಹೆಚ್ಚು ಸಾವುಗಳು ಸಂಭವಿಸಿವೆ. ಆದರೆ, 2021ರಲ್ಲಿನ ಅಧಿಕೃತ ಕೋವಿಡ್ ಮರಣ ಪ್ರಮಾಣದ ಎಣಿಕೆಯಲ್ಲಿ ಕೇರಳ, ಉತ್ತರಾಖಂಡ, ಅಸ್ಸಾಂ, ಮಹಾರಾಷ್ಟ್ರ ಹಾಗೂ ದಿಲ್ಲಿಯಲ್ಲಿ ಅತ್ಯಂತ ಕನಿಷ್ಠ ವ್ಯತ್ಯಾಸ ಕಂಡು ಬಂದಿದೆ ಎಂಬುದು ದತ್ತಾಂಶಗಳಿಂದ ಬಹಿರಂಗವಾಗಿದೆ.

ಬುಧವಾರ ಬಿಡುಗಡೆಯಾಗಿರುವ ನಾಗರಿಕ ನೋಂದಣಿ ವ್ಯವಸ್ಥೆ ಆಧರಿಸಿದ ಭಾರತದ ಪ್ರಮುಖ ಅಂಕಿಸಂಖ್ಯೆಯ ವರದಿ ಪ್ರಕಾರ, ಕೊನೆಯ ಕೋವಿಡ್ ಬರುವುದಕ್ಕೆ ಹಿಂದಿನ ವರ್ಷ 2019ಕ್ಕೆ ಹೋಲಿಸಿದರೆ, 2021ರಲ್ಲಿ ಸುಮಾರು 25.8 ಲಕ್ಷಕ್ಕೂ ಅಧಿಕ ಸಾವುಗಳು ಸಂಭವಿಸಿದೆ ಎಂದು ಹೇಳಲಾಗಿದೆ.

ಸೌಜನ್ಯ: TOI

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News