×
Ad

ಮುಂಬೈ | 12 ನಿಮಿಷಗಳ ಕಾಲ ನಿಲ್ಲಿಸಿ ಹೆಚ್ಚುವರಿ ಜನರನ್ನು ಕೆಳಗಿಳಿಸಿದ ಮೊನೊ ರೈಲು

Update: 2025-08-21 20:30 IST

ಮೊನೊ ರೈಲು | PTI 

ಮುಂಬೈ: ಮಂಗಳವಾರ ಅತಿಯಾದ ಜನದಟ್ಟಣೆಯಿಂದ ಸ್ತಂಭಗಳ ಮೇಲೆ ಸ್ಥಗಿತಗೊಂಡಿದ್ದ ಮೊನೊರೈಲಿನಿಂದ ಜನರನ್ನು ಅಗ್ನಿಶಾಮಕ ದಳದ ನೆರವಿನೊಂದಿಗೆ ಕೆಳಗಿಳಿಸಿದ ಘಟನೆ ನಡೆದ ಬೆನ್ನಿಗೇ, ಗುರುವಾರ ಬೆಳಗ್ಗೆ ಅತಿಯಾದ ಜನದಟ್ಟಣೆಯಿಂದಾಗಿ ಹೆಚ್ಚುವರಿ ಜನರನ್ನು ರೈಲಿನಿಂದ ಕೆಳಗಿಳಿಸಲು ಮೊನೊರೈಲು 12 ನಿಮಿಷಗಳ ಕಾಲ ಸ್ಥಗಿತಗೊಂಡಿರುವ ಘಟನೆ ಆಚಾರ್ಯ ಅತ್ರೆ ಚೌಕ ನಿಲ್ದಾಣದಲ್ಲಿ ನಡೆದಿದೆ.

ಆದರೆ, ಇದು ತಾಂತ್ರಿಕ ಸಮಸ್ಯೆಯ ಕಾರಣಕ್ಕಾದ ನಿಲುಗಡೆಯಲ್ಲ, ಬದಲಿಗೆ, ಹೆಚ್ಚುವರಿ ಜನರನ್ನು ಕೆಳಗಿಳಿಸಲು ಆದ ನಿಲುಗಡೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಗಾಗ್ಡೆಬಾಬಾ ಚೌಕ್ ಗೆ ತೆರಳುತ್ತಿದ್ದ ರೈಲೊಂದು ಗುರುವಾರ ಬೆಳಗ್ಗೆ 9.28 ಗಂಟೆಯ ನಂತರ, ಆಚಾರ್ಯ ಅತ್ರೆ ಚೌಕ ನಿಲ್ದಾಣದ ಬಳಿ 12 ನಿಮಿಷಗಳ ಕಾಲ ಸ್ಥಗಿತಗೊಂಡಿತು ಎಂದು ಮಹಾ ಮುಂಬೈ ಮೆಟ್ರೊ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನ ವಕ್ತಾರೆ ಸ್ವಾತಿ ಲೋಖಂಡೆ ತಿಳಿಸಿದ್ದಾರೆ. ಆದರೆ, ಯಾವುದೇ ತಾಂತ್ರಿಕ ಸಮಸ್ಯೆಯಿಂದ ಅದು ನಿಲುಗಡೆಯಾಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ನಿನ್ನ ಜಾರಿಯಾಗಿರುವ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನದ ಪ್ರಕಾರ, 104 ಮೆಟ್ರಿಕ್ ಟನ್ ಬದಲು 107 ಮೆಟ್ರಿಕ್ ಟನ್ ಜನರು ರೈಲಿನಲ್ಲಿದ್ದುದರಿಂದ, ಜನರನ್ನು ರೈಲಿನಿಂದ ಕೆಳಗಿಳಿಸಲು ರೈಲನ್ನು ಕೆಲ ಸಮಯ ನಿಲುಗಡೆ ಮಾಡಲಾಗಿತ್ತು” ಎಂದು ಅವರು ಹೇಳಿದ್ದಾರೆ.

“ಬಹುತೇಕ ಪ್ರಯಾಣಿಕರು ರೈಲಿನಿಂದ ಕೆಳಗಿಳಿಯಲು ಹಿಂಜರಿದಿದ್ದರಿಂದ, ಪ್ರಯಾಣಿಕರನ್ನು ಕೆಳಗಿಳಿಸುವ ಕೆಲಸ ಕೆಲ ಹೊತ್ತು ಹಿಡಿಯಿತು” ಎಂದೂ ಅವರು ತಿಳಿಸಿದ್ದಾರೆ.

ದೇಶದ ಏಕೈಕ ಮೊನೊರೈಲ್ ಕಾರಿಡಾರ್ ಮುಂಬೈನಲ್ಲಿ ಮಾತ್ರವಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News