×
Ad

"34 ವಾಹನಗಳಲ್ಲಿ ಮಾನವ ಬಾಂಬ್​ಗಳನ್ನು ಇರಿಸಲಾಗಿದೆ": ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ

Update: 2025-09-05 14:53 IST

ಸಾಂದರ್ಭಿಕ ಚಿತ್ರ (PTI)

ಮುಂಬೈ: ಮುಂಬೈನಾದ್ಯಂತ 34 ವಾಹನಗಳಲ್ಲಿ 400 ಕೆಜಿ ಆರ್​ಡಿಎಕ್ಸ್​ ಹೊತ್ತ ಮಾನವ ಬಾಂಬ್​ಗಳನ್ನು ಇರಿಸಲಾಗಿದೆ, ಅವು ಸ್ಫೋಟಗೊಂಡು ಇಡೀ ನಗರವನ್ನೇ ನಡುಗಿಸಲಿವೆ ಎಂದು ಶುಕ್ರವಾರ ಮುಂಬೈ ಸಂಚಾರ ಪೊಲೀಸರ ಅಧಿಕೃತ ವಾಟ್ಸ್ ಆ್ಯಪ್ ಸಂಖ್ಯೆಗೆ ಬೆದರಿಕೆ ಸಂದೇಶವೊಂದು ರವಾನೆಯಾಗಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬೆದರಿಕೆ ಸಂದೇಶದಲ್ಲಿ ತನ್ನನ್ನು ತಾನು ‘ಲಷ್ಕರ್-ಇ-ಜಿಹಾದಿ’ ಎಂದು ಹೇಳಿಕೊಂಡಿದ್ದು, ಭಾರತಕ್ಕೆ 14 ಮಂದಿ ಪಾಕಿಸ್ತಾನಿ ಉಗ್ರರು ಪ್ರವೇಶಿಸಿದ್ದಾರೆ. ಸ್ಫೋಟ ನಡೆಸಲು 400 ಕೆಜಿ ಆರ್‌ಡಿಎಕ್ಸ್ ಸ್ಫೋಟಕ ಸಾಮಗ್ರಿಯನ್ನು ಬಳಸಲಾಗುವುದು ಎಂದು ಈ ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದರ ಬೆನ್ನಿಗೇ, ಮುಂಬೈ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ರಾಜ್ಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಈ ಬೆದರಿಕೆಯ ಎಲ್ಲ ಆಯಾಮಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News