×
Ad

ಅ 3ರಂದು ದೇಶಾದ್ಯಂತ ಬಂದ್‌ ಗೆ ಕರೆ ನೀಡಿದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

Update: 2025-09-25 22:34 IST

ಹೊಸದಿಲ್ಲಿ : ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) 2025 ರ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಅಕ್ಟೋಬರ್ 3ರಂದು ದೇಶಾದ್ಯಂತ ಬಂದ್ ನಡೆಸಲು ಕರೆ ನೀಡಿದೆ.

ಕಚೇರಿಗಳು ಮತ್ತು ವ್ಯಾಪಾರ ಮಳಿಗೆಗಳನ್ನು ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಮುಚ್ಚಬೇಕು. ಆಸ್ಪತ್ರೆಗಳು ಮತ್ತು ಅವುಗಳ ಆವರಣ ಸೇವಾ ಸಂಸ್ಥೆಗಳಿಗೆ ಈ ಬಂದ್‌ ನಿಂದ ವಿನಾಯಿತಿ ನೀಡಲಾಗಿದೆ.

ಈ ಬಂದ್ ಶಾಂತಿಯುತ ಪ್ರತಿಭಟನೆವಾಗಿದ್ದು, ಯಾವುದೇ ಸಮುದಾಯದ ವಿರುದ್ಧದ ದಾಳಿ ಅಲ್ಲ. ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಸಾಮೂಹಿಕ ಧ್ವನಿ ಎತ್ತುವುದೇ ಉದ್ದೇಶ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ.

AIMPLB ಅಧ್ಯಕ್ಷ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಮತ್ತು ಇತರ ಪದಾಧಿಕಾರಿಗಳು ಶುಕ್ರವಾರ ಮಸೀದಿಗಳ ಖತೀಬರ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಲು, ಮತ್ತು ಸಂಪೂರ್ಣವಾಗಿ ಬಂದ್ ನಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News