×
Ad

ನಾಗ್ಪುರ ಹಿಂಸಾಚಾರ ಪ್ರಕರಣ : ಎಂಡಿಪಿ ಮುಖಂಡನ ಬಂಧನ

Update: 2025-03-19 14:50 IST

Photo credit: PTI

ಮುಂಬೈ : ಮಾರ್ಚ್ 17ರಂದು ನಡೆದ ನಾಗ್ಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಮೈನಾರಿಟಿ ಡೆಮಾಕ್ರೆಟಿಕ್ ಪಕ್ಷದ(MDP) ಸ್ಥಳೀಯ ಮುಖಂಡನನ್ನು ನಾಗ್ಪುರ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಎಂಡಿಪಿ ನಗರ ಘಟಕದ ಅಧ್ಯಕ್ಷ, ಯಶೋಧರ ನಗರದ ಸಂಜಯ್ ಬಾಗ್ ಕಾಲೋನಿ ನಿವಾಸಿ ಫಾಹಿಮ್ ಶಮೀಮ್ ಖಾನ್(38) ಬಂಧಿತ. ಗಣೇಶ್‌ಪೇಟ್‌ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾದ ಬೆನ್ನಲ್ಲೇ ಶಮೀಮ್ ಖಾನ್ ಬಂಧನ ನಡೆದಿದೆ. ಖಾನ್ ವಿರುದ್ಧ ಉದ್ರೇಕಕಾರಿ ಭಾಷಣ ಮಾಡಿರುವ ಆರೋಪ ಹೊರಿಸಲಾಗಿದೆ.

ಫಾಹಿಮ್ ಖಾನ್ 2024ರ ಲೋಕಸಭಾ ಚುನಾವಣೆಯಲ್ಲಿ ನಾಗ್ಪುರ ಕ್ಷೇತ್ರದಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಎಂಡಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News