×
Ad

ಮೋದಿ 75 ವರ್ಷಕ್ಕೆ ನಿವೃತ್ತಿ ಘೋಷಿಸದಿದ್ದರೆ ʼಇತರ ವಿಧಾನಗಳಿಂದʼ ಅವರನ್ನು ತೆಗೆದುಹಾಕಲಾಗುತ್ತೆ: ಸುಬ್ರಮಣಿಯನ್ ಸ್ವಾಮಿ

Update: 2024-08-21 13:12 IST

ಸುಬ್ರಮಣಿಯನ್ ಸ್ವಾಮಿ (Photo: PTI)

ಹೊಸದಿಲ್ಲಿ: ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ 75 ನೇ ಹುಟ್ಟುಹಬ್ಬದೊಳಗೆ ನಿವೃತ್ತಿ ಘೋಷಿಸದಿದ್ದರೆ, "ಇತರ ವಿಧಾನಗಳಿಂದ" ಅವರನ್ನು ತಮ್ಮ ಸ್ಥಾನದಿಂದ ತೆಗೆದುಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ x ನಲ್ಲಿ ಪೋಸ್ಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, "ಮೋದಿ ಅವರು ಆರೆಸ್ಸೆಸ್ ಪ್ರಚಾರಕ ಸಂಸ್ಕಾರಕ್ಕೆ ಬದ್ಧರಾಗಿ ಸೆ.17 ರಂದು ತಮ್ಮ 75 ನೇ ವರ್ಷದ ಹುಟ್ಟುಹಬ್ಬದ ನಂತರ  ನಿವೃತ್ತಿ ಘೋಷಿಸದಿದ್ದರೆ, ಅವರು ಇತರ ವಿಧಾನಗಳಿಂದ ತಮ್ಮ ಪ್ರಧಾನಿ ಕುರ್ಚಿಯನ್ನು ಕಳೆದುಕೊಳ್ಳುತ್ತಾರೆ" ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸುಬ್ರಮಣಿಯನ್ ಸ್ವಾಮಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು ಇದೇ ಮೊದಲಲ್ಲ. ಇತ್ತೀಚೆಗೆ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರು ದೇಶ ಬಿಟ್ಟು ತೆರಳಿದಾಗ ಮೋದಿ ನಡುಗುತ್ತಿದ್ದರು ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News