×
Ad

ಝೀ ನ್ಯೂಸ್ ನ ‘ಮೆಹೆಂದಿ ಜಿಹಾದ್’ ಕಾರ್ಯಕ್ರಮ ತೆಗೆದು ಹಾಕಲು NBDSA ನಿರ್ದೇಶನ

Update: 2025-10-05 11:31 IST

ಹೊಸದಿಲ್ಲಿ: ಕಳೆದ ವರ್ಷ ಪ್ರಸಾರಗೊಂಡ ‘ಮೆಹೆಂದಿ ಜಿಹಾದ್’ ಕುರಿತ ಕಾರ್ಯಕ್ರಮಗಳನ್ನು ತಕ್ಷಣವೇ ತೆಗೆದುಹಾಕುವಂತೆ NBDSAಯು ಝೀ ನ್ಯೂಸ್ ಚಾನೆಲ್‌ ಗೆ ಸೂಚನೆ ನೀಡಿದೆ.

ಮುಸ್ಲಿಂ ವಿರೋಧಿ ತಪ್ಪು ಮಾಹಿತಿಯನ್ನು ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಝೀ ನ್ಯೂಸ್ ಚಾನೆಲ್ ವಿರುದ್ಧ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಮತ್ತು ಡಿಜಿಟಲ್ ಸ್ಟಾಂಡರ್ಡ್ಸ್ ಅಥಾರಿಟಿ (NBDSA) ಈ ಕ್ರಮ ಕೈಗೊಂಡಿದೆ.

ಝೀ ನ್ಯೂಸ್ ಪ್ರಸಾರ ಮಾಡಿದ್ದ ಕಾರ್ಯಕ್ರಮದಲ್ಲಿ, 'ಕರ್ವಾ ಚೌತ್' ಹಬ್ಬದ ಸಂದರ್ಭ ಹಿಂದೂ ಮಹಿಳೆಯರಿಗೆ ಮೆಹೆಂದಿ ಹಚ್ಚುವ ಮೊದಲು ಮುಸ್ಲಿಂ ಕಲಾವಿದರು ಉಗುಳುತ್ತಾರೆ ಎಂಬ ಆಧಾರರಹಿತ ಹಾಗೂ ದ್ವೇಷ ಹರಡುವ ವಿಷಯಗಳನ್ನು ಒಳಗೊಂಡಿತ್ತು. NBDSA ಈ ಕಾರ್ಯಕ್ರಮವು ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಸ್ಪಷ್ಟವಾಗಿ ಹೇಳಿದೆ.

ನ್ಯಾಯಮೂರ್ತಿ (ನಿವೃತ್ತ) ಎ.ಕೆ. ಸಿಕ್ರಿ ಅವರ ನೇತೃತ್ವದ NBDSA, ಝೀ ನ್ಯೂಸ್ ಗೆ ಎಚ್ಚರಿಕೆ ನೀಡಿದ್ದು, ಭವಿಷ್ಯದಲ್ಲಿ ಇಂತಹ ವಿಷಯಗಳನ್ನು ಪ್ರಸಾರ ಮಾಡುವಾಗ ವೃತ್ತಿಪರ ಜವಾಬ್ದಾರಿಯನ್ನು ಪಾಲಿಸಲು ಸೂಚನೆ ನೀಡಿದೆ.

2024ರ ಅಕ್ಟೋಬರ್‌ನಲ್ಲಿ ಈ ಕಾರ್ಯಕ್ರಮ ಪ್ರಸಾರವಾದ ಬಳಿಕ ಇಂದ್ರಜೀತ್ ಘೋರ್ಪಡೆ (@jeetxg) ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News