×
Ad

ನಮಗೆ ತಮಿಳು ರಾಷ್ಟ್ರವಾದ ಬೇಕು, ಹಿಂದೂ ರಾಷ್ಟ್ರವಾದವಲ್ಲ: ಡಿಎಂಕೆ ಸಂಸದ ಎ. ರಾಜಾ

Update: 2024-01-21 22:44 IST

Photo : ANI ( ಡಿಎಂಕೆ ಸಂಸದ ಎ. ರಾಜಾ ) 

ಸೇಲಂ: ತಮಿಳುನಾಡಿಗೆ ದ್ರಾವಿಡ ರಾಷ್ಟ್ರವಾದ ಮತ್ತು ತಮಿಳು ರಾಷ್ಟ್ರವಾದ ಅಗತ್ಯವಿದೆಯೇ ಹೊರತು ಹಿಂದೂ ರಾಷ್ಟ್ರವಾದವಲ್ಲ ಎಂದು ಡಿಎಂಕೆ ಸಂಸದ ಎ.ರಾಜಾ ರವಿವಾರ ಹೇಳಿದರು. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಮುನ್ನಾ ದಿನ ಅವರ ಈ ಹೇಳಿಕೆ ಹೊರಬಿದ್ದಿದೆ.

ಸಮಾವೇಶವೊಂದರಲ್ಲಿ ಮಾತನಾಡಿದ ರಾಜಾ, ‘ಧರ್ಮವು ಎಂದೂ ರಾಷ್ಟ್ರೀಯತೆಯಾಗುವುದಿಲ್ಲ, ಆದರೆ ಭಾಷೆಯು ರಾಷ್ಟ್ರೀಯತೆಯಾಗಬಲ್ಲದು. ನಾವು ಜಾತಿಯ ಹೆಸರಿನಲ್ಲಿ ಬೇರ್ಪಟ್ಟಿದ್ದೇವೆ ಮತ್ತು ನೀವು ಧರ್ಮದ ಹೆಸರಿನಲ್ಲಿ ನಮ್ಮನ್ನು ಒಂದಾಗಿಸಲು ಪ್ರಯತ್ನಿಸುತ್ತಿದ್ದೀರಿ. ನಾವು ಕಾನೂನಿನ ಪ್ರಕಾರ ಧರ್ಮದ ಹೆಸರಿನಲ್ಲಿ ಒಂದಾಗಲು ಬಯಸುತ್ತೇವೆ, ಆದರೆ ನೀವು ಹೇಳಿದಂತೆ ಹಿಂದೂಗಳಾಗಲು ನಾವು ಬಯಸುವುದಿಲ್ಲ ಮತ್ತು ಹಿಂದೂ ರಾಷ್ಟ್ರವಾದವೂ ನಮಗೆ ಬೇಕಿಲ್ಲ. ನಮಗೆ ದ್ರಾವಿಡ ಮತ್ತು ತಮಿಳು ರಾಷ್ಟ್ರವಾದ ಬೇಕು’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News