×
Ad

ನೀಟ್-ಯುಜಿ ಪರೀಕ್ಷೆ: ಸುಗಮ ನಿರ್ವಹಣೆಗಾಗಿ ದೇಶಾದ್ಯಂತ ಪರೀಕ್ಷಾ ಕೇಂದ್ರಗಳಲ್ಲಿ ಅಣಕು ಕಾರ್ಯಾಚರಣೆ

Update: 2025-05-03 22:19 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ದೇಶವ್ಯಾಪಿ ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆಯು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಶನಿವಾರ ದೇಶದ ಎಲ್ಲ ನೀಟ್-ಯುಜಿ ಕೇಂದ್ರಗಳಲ್ಲಿ ಅಣಕು ಕಾರ್ಯಾಚರಣೆಗಳನ್ನು ನಡೆಸಲಾಗಿದೆ.

ನಾಳೆ ಮೇ 4ರಂದು ದೇಶಾದ್ಯಂತ 500ಕ್ಕೂ ಅಧಿಕ ನಗರಗಳ 5,453 ಕೇಂದ್ರಗಳಲ್ಲಿ ನೀಟ್-ಯುಜಿ ಪರೀಕ್ಷೆ ನಡೆಯಲಿದ್ದು,ಈ ವರ್ಷ 22.7 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಪರೀಕ್ಷೆಯ ದಿನ ಜಿಲ್ಲಾ,ರಾಜ್ಯ ಮತ್ತು ಕೇಂದ್ರ ಮಟ್ಟಗಳಲ್ಲಿ ಮೂರು ಹಂತಗಳ ಮೇಲ್ವಿಚಾರಣೆ ನಡೆಯಲಿದೆ ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು.

ಹೆಚ್ಚಿನ ಪರೀಕ್ಷಾ ಕೇಂದ್ರಗಳನ್ನು ಸರಕಾರಿ ಮತ್ತು ಸರಕಾರಿ ಅನುದಾನಿತ ಶಾಲೆಗಳು,ಕಾಲೇಜುಗಳು,ವಿವಿಗಳು ಮತ್ತು ಸಂಸ್ಥೆಗಳಲ್ಲಿ ಸ್ಥಾಪಿಸಲಾಗಿದೆ.

ಪರೀಕ್ಷೆಗೆ ಮುನ್ನ,ಪರೀಕ್ಷೆ ಸಮಯದಲ್ಲಿ ಮತ್ತು ಪರೀಕ್ಷೆಯ ಬಳಿಕ ಅಕ್ರಮಗಳಲ್ಲಿ ತೊಡಗಿರುವುದು ಕಂಡುಬಂದರೆ ಸಾರ್ವಜನಿಕ ಪರೀಕ್ಷೆಗಳ(ಅಕ್ರಮಗಳಿಗೆ ತಡೆ) ಕಾಯ್ದೆ 2024ರ ಅಡಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ ಮತ್ತು ಎನ್‌ಟಿಎ ನಡೆಸುವ ಪರೀಕ್ಷೆಗಳಿಗೆ ಹಾಜರಾಗುವುದಕ್ಕೆ ಮೂರು ವರ್ಷಗಳ ನಿಷೇಧ ಸೇರಿದಂತೆ ದಂಡನೆಗಳಿಗೆ ಗುರಿಯಾಗಬೇಕಾಗುತ್ತದೆ ಎಂದು ಸಚಿವಾಲಯವು ಎಚ್ಚರಿಕೆ ನೀಡಿದೆ.

ಕಳೆದ ವರ್ಷ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವಾರು ಅವ್ಯವಹಾರಗಳು ನಡೆದಿದ್ದು,ಇವು ಪರೀಕ್ಷೆಯ ಋಜುತ್ವದ ಬಗ್ಗೆ ಶಂಕೆ ಮೂಡಿಸಿದ್ದವು. ಈ ಹಿನ್ನೆಲೆಯಲ್ಲಿ ಈ ವರ್ಷ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News