×
Ad

ನವವಿವಾಹಿತ ಪತ್ನಿಯ ಕತ್ತು ಹಿಸುಕಿ ಹತ್ಯೆಗೈದ ವ್ಯಕ್ತಿ

Update: 2023-09-20 13:22 IST

ವಯನಾಡ್: ಪತಿಯೊಬ್ಬ ತನ್ನ ನವ ವಿವಾಹಿತ ಪತ್ನಿಯ ಕತ್ತು ಹಿಸುಕಿ ಹತ್ಯೆಗೈದಿರುವ ಘಟನೆ ಉತ್ತರ ವಯನಾಡ್ ಜಿಲ್ಲೆಯ ಕೊತ್ತತಾರಾ ಬಳಿ ನಡೆದಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ. ಈ ಆಘಾತಕಾರಿ ಘಟನೆಯು ಮಂಗಳವಾರ ರಾತ್ರಿ ನಡೆದಿದ್ದು, ಈ ವಿಷಯದ ಕುರಿತು ಸ್ವತಃ ಪತಿಯೇ ಮಾಹಿತಿ ನೀಡಿದ್ದಾನೆ ಎಂದು ಕಂಬಲಕ್ಕಡ್ ಪೊಲೀಸರು ತಿಳಿಸಿದ್ದಾರೆ.

ಮೃತ ಮಹಿಳೆ ಅನಿಶಾ (34) ಎಂಬಾಕೆ ದಿನಗೂಲಿ ಕಾರ್ಮಿಕನಾದ ಮುಕೇಶ್ (33) ಎಂಬಾತನನ್ನು ಆರು ತಿಂಗಳ ಹಿಂದೆಯಷ್ಟೆ ವಿವಾಹವಾಗಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, "ಹತ್ಯೆಗೆ ನಿರ್ದಿಷ್ಟ ಕಾರಣವನ್ನು ಇನ್ನಷ್ಟೆ ಪತ್ತೆ ಹಚ್ಚಬೇಕಿದೆ. ನಾನು ಪಾನಮತ್ತನಾಗಿದ್ದುದರಿಂದ ಈ ಕೃತ್ಯವೆಸಗಿದ್ದೇನೆ ಎಂದು ಸ್ವತಃ ಆರೋಪಿಯೇ ಹೇಳಿದ್ದಾನೆ" ಎಂದು ತಿಳಿಸಿದ್ದಾರೆ.

ಆರೋಪಿ ಮುಕೇಶ್ ತನ್ನ ಪತ್ನಿಯ ಹತ್ಯೆ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆಯೇ ಅವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲಿ ಆತನ ಪತ್ನಿಯು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಆರೋಪಿ ಮುಕೇಶ್‌ನನ್ನು ಪೊಲೀಸರು ಶೀಘ್ರದಲ್ಲಿಯೇ ವಶಕ್ಕೆ ಪಡೆಯಲಿದ್ದಾರೆ.

ಪ್ರಕರಣದ ಸಂಬಂಧ ವಿಚಾರಣಾ ಪ್ರಕ್ರಿಯೆಗಳು ಪ್ರಗತಿಯಲ್ಲಿದ್ದು, ಇದಾದ ನಂತರ ವಿಸ್ತೃತ ವಿಚಾರಣೆಯನ್ನು ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News