×
Ad

ಪಾಕ್‌ ಆಟಗಾರನ ಎದುರು ‘ಜೈ ಶ್ರೀರಾಮ್‌’ ಘೋಷಣೆ: ಉದಯನಿಧಿ ಸ್ಟಾಲಿನ್ ಕಿಡಿ

Update: 2023-10-15 12:35 IST

Screengrab:X/@Udhaystalin

ಚೆನ್ನೈ: ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯದ ವೇಳೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕಿಸ್ತಾನದ ಆಟಗಾರ ಮುಹಮ್ಮದ್ ರಿಝ್ವಾನ್ ಡ್ರೆಸ್ಸಿಂಗ್ ರೂಮ್‌ಗೆ ತೆರಳುತ್ತಿದ್ದಾಗ ಕೆಲವು ಮಂದಿ ʼಜೈ ಶ್ರೀ ರಾಮ್ʼ ಘೋಷಣೆಗಳನ್ನು ಕೂಗಿರುವುದನ್ನು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಖಂಡಿಸಿದ್ದಾರೆ.

ಈ ವರ್ತನೆ ʼಸ್ವೀಕಾರಾರ್ಹವಲ್ಲʼ ಎಂದು ಸ್ಟಾಲಿನ್‌ ಟ್ವೀಟ್‌ ಮಾಡಿದ್ದಾರೆ.

"ಭಾರತವು ತನ್ನ ಕ್ರೀಡಾ ಮನೋಭಾವ ಮತ್ತು ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಆದಾಗ್ಯೂ, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ಆಟಗಾರರಿಗೆ ತೋರಿದ ವರ್ತನೆಯು ಸ್ವೀಕಾರಾರ್ಹವಲ್ಲ. ಮಾತ್ರವಲ್ಲ ಅದು ಕೀಳುಮಟ್ಟದ್ದು. ಕ್ರೀಡೆಗಳು ದೇಶಗಳ ನಡುವೆ ಒಗ್ಗೂಡಿಸುವ ಶಕ್ತಿಯಾಗಬೇಕು, ನಿಜವಾದ ಸಹೋದರತ್ವವನ್ನು ಬೆಳೆಸಬೇಕು. ದ್ವೇಷವನ್ನು ಹರಡುವ ಸಾಧನವಾಗಿ ಬಳಸುತ್ತಿರುವುದು ಖಂಡನೀಯ.” ಎಂದು ಉದಯನಿಧಿ X ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News