×
Ad

ಉತ್ತರ ಪ್ರದೇಶ | ವರದಕ್ಷಿಣೆಗಾಗಿ ಮಹಿಳೆಯನ್ನು ಬೆಂಕಿ ಹಚ್ಚಿ ಕೊಲೆ ಪ್ರಕರಣ : ಆರೋಪಿಯ ಕಾಲಿಗೆ ಗುಂಡಿಕ್ಕಿದ ಪೊಲೀಸರು

Update: 2025-08-24 16:08 IST

PC :indiatoday.in

ಲಕ್ನೋ : ನೋಯ್ಡಾದಲ್ಲಿ ವರದಕ್ಷಿಣೆ ಕಿರುಕುಳ ನೀಡಿ ನಿಕ್ಕಿ ಎಂಬ ಮಹಿಳೆಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಬಂಧಿತ ಆರೋಪಿ ಪತಿ ವಿಪಿನ್ ಪೊಲೀಸರ ವಶದಿಂದ ಪರಾರಿಯಾಗಲು ಯತ್ನಿಸಿದಾಗ ಆತನ ಕಾಲಿಗೆ ಗುಂಡಿಕ್ಕಿ ಪೊಲೀಸರು ಬಂಧಿಸಿದ್ದಾರೆ.

ಗ್ರೇಟರ್ ನೋಯ್ಡಾದಲ್ಲಿ ವರದಕ್ಷಿಣೆ ಕಿರುಕುಳ ನೀಡಿ ನಿಕ್ಕಿ ಎಂಬ ಮಹಿಳೆಯನ್ನು ಪತಿ, ಮಾವ, ಅತ್ತೆ ಸೇರಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದರು.

ಪೊಲೀಸರ ಪ್ರಕಾರ, ವಿಪಿನ್ ಪೊಲೀಸ್ ಅಧಿಕಾರಿಯೋರ್ವರಿಂದ ಪಿಸ್ತೂಲ್ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಪದೇ ಪದೇ ಎಚ್ಚರಿಕೆ ನೀಡಿದರೂ ಸಿರ್ಸಾ ಚೌರಾಹಾ ಬಳಿ ಪೊಲೀಸರ ವಶದಿಂದ ಆತ ಪರಾರಿಯಾಗಿದ್ದಾನೆ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡಿಕ್ಕಿದ್ದಾರೆ.

ಎನ್ ಕೌಂಟರ್ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತೆ ನಿಕ್ಕಿಯ ತಂದೆ, ಪೊಲೀಸರ ನಡೆ ಸರಿಯಾಗಿದೆ. ಕ್ರಿಮಿನಲ್ ಓರ್ವ ಯಾವಾಗಲೂ ಪರಾರಿಯಾಗಲು ಯತ್ನಿಸುತ್ತಾನೆ. ಇತರ ಆರೋಪಗಳನ್ನು ಕೂಡ ಸೆರೆ ಹಿಡಿಯಬೇಕು ಎಂಬುದು ನನ್ನ ಮನವಿಯಾಗಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News