×
Ad

ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ| ಒಡಿಶಾ ಬಂದ್ ಗೆ ಕರೆ ನೀಡಿದ ವಿಪಕ್ಷಗಳು: ಜನಜೀವನ ಅಸ್ತವ್ಯಸ್ತ

Update: 2025-07-17 15:42 IST

Photo credit: PTI

ಭುವನೇಶ್ವರ: ತನ್ನ ವಿರುದ್ಧ ನಡೆದಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನನಗೆ ನ್ಯಾಯ ದೊರೆತಿಲ್ಲ ಎಂದು ಆರೋಪಿಸಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಬಂಧ ಕಾಂಗ್ರೆಸ್ ಹಾಗೂ ಇನ್ನಿತರ ವಿಪಕ್ಷಗಳು ಗುರುವಾರ 12 ಗಂಟೆಗಳ ಕಾಲ ಒಡಿಶಾ ಬಂದ್ ಗೆ ಕರೆ ನೀಡಿದ್ದರಿಂದ, ಒಡಿಶಾದ ಕೆಲ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು ಎಂದು ವರದಿಯಾಗಿದೆ.

ಕೆಲವೇ ವಾಹನಗಳು ಸಂಚರಿಸುತ್ತಿದ್ದುದರಿಂದ, ಭುವನೇಶ್ವರ, ಕಟಕ್ ಹಾಗೂ ರಾಜ್ಯದ ಇನ್ನಿತರ ಪ್ರದೇಶಗಳ ರಸ್ತೆಗಳು ನಿರ್ಜನವಾಗಿದ್ದಂತೆ ಕಂಡು ಬಂದವು. ಇದರೊಂದಿಗೆ, ಬೆಳಗ್ಗೆ 6 ಗಂಟೆಯಿಂದ ನಡೆಯುತ್ತಿರುವ ಬಂದ್ ಗೆ ಬೆಂಬಲವಾಗಿ ವಿಪಕ್ಷಗಳು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ, ಜತ್ನಿ, ಪುರಿ ಹಾಗೂ ಭದ್ರಕ್ ನಂತಹ ಕೆಲ ನಿಲ್ದಾಣಗಳಲ್ಲಿ ರೈಲು ಸಂಚಾರ ಕೂಡಾ ಅಸ್ತವ್ಯಸ್ತಗೊಂಡಿತು.

ರಾಜ್ಯಾದ್ಯಂತ ಮಾರುಕಟ್ಟೆಗಳು, ಶಾಲೆಗಳು, ವ್ಯಾಪಾರಿ ಮಳಿಗೆಗಳು ಮುಚ್ಚಿದ್ದವು.

ರಾಜ್ಯ ರಾಜಧಾನಿಯ ವಿವಿಧ ಕೂಡು ರಸ್ತೆಗಳಲ್ಲಿ ಪ್ರತಿಭಟನಾಕಾರರು ರಸ್ತೆ ತಡೆಯನ್ನೂ ನಡೆಸಿದರು ಹಾಗೂ ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಾಲಾಸೋರ್ ನ ಮೃತ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರೆಲ್ಲ ಆಗ್ರಹಿಸಿದರು.

ಈ ಬಂದ್ ನಲ್ಲಿ ತಮ್ಮ ತಮ್ಮ ಪಕ್ಷಗಳ ಧ್ವಜಗಳನ್ನು ಕೈಯಲ್ಲಿ ಹಿಡಿದುಕೊಂಡು ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ಸಿಪಿಐ (ಎಂಎಲ್), ಫಾರ್ವರ್ಡ್ ಬ್ಲಾಕ್, ಆರ್ಜೆಡಿ, ಎಸ್ಪಿ ಹಾಗೂ ಎನ್ಸಿಪಿ ಕಾರ್ಯಕರ್ತರು ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News