×
Ad

ವೀಸಾ ನಿಯಮಗಳ ಉಲ್ಲಂಘನೆಗಾಗಿ ಫ್ರೆಂಚ್ ಪತ್ರಕರ್ತೆಗೆ ನೋಟಿಸ್: ಫ್ರಾನ್ಸ್‌ಗೆ ತಿಳಿಸಿದ ಭಾರತ

Update: 2024-01-28 16:48 IST

Photo: X/ @RSF_inter.

ಹೊಸದಿಲ್ಲಿ : ಫ್ರೆಂಚ್ ಮೂಲದ ದಿಲ್ಲಿ ಪತ್ರಕರ್ತೆಗೆ ವೀಸಾ ನಿಯಮಗಳ ಉಲ್ಲಂಘನೆಯ ಕಾರಣದಿಂದ ನೋಟಿಸ್ ನೀಡಲಾಗಿದೆಯೇ ಹೊರತು ವೃತ್ತಿ ಸಂಬಂಧಿತ ಕಾರಣದಿಂದಲ್ಲ ಎಂದು ಭಾರತ ಸರಕಾರವು ಫ್ರೆಂಚ್ ಸರಕಾರಕ್ಕೆ ತಿಳಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಎರಡು ದಿನಗಳ ಭೇಟಿಯ ಭಾಗವಾಗಿ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಈ ವಿಷಯ ಬಂದಾಗ ಭಾರತವು ಫ್ರೆಂಚ್ ನಿಯೋಗಕ್ಕೆ ಇದನ್ನು ತಿಳಿಸಿತು ಎಂದು ತಿಳಿದು ಬಂದಿದೆ.

ಫ್ರೆಂಚ್ ಪತ್ರಕರ್ತೆ ವನೆಸ್ಸಾ ಡೌಗ್ನಾಕ್ ಅವರಿಗೆ ವೀಸಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ನೋಟಿಸ್ ಜಾರಿ ಮಾಡಲಾಗಿದ್ದು, ಫೆಬ್ರವರಿ 2 ರೊಳಗೆ ಅವರಿಂದ ಪ್ರತಿಕ್ರಿಯೆಯನ್ನು ಕೋರಲಾಗಿದೆ ಎನ್ನಲಾಗಿದೆ.

"ಭೇಟಿಯ ಮೊದಲು ಮತ್ತು ಭೇಟಿಯ ಸಮಯದಲ್ಲಿ ಇದನ್ನು ಫ್ರೆಂಚ್ ರಾಜತಾಂತ್ರಿಕರ ಕಡೆಯಿಂದ ಈ ವಿಚಾರ ನಮ್ಮ ಗಮನಕ್ಕೆ ತರಲಾಗಿದೆ" ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಮ್ಯಾಕ್ರನ್ ಅವರ ಮಾತುಕತೆಯ ವಿಚಾರವನ್ನು ತಿಳಿಸುವ ಸಂದರ್ಭದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಡೌಗ್ನಾಕ್ ಎರಡು ದಶಕಗಳಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ. ದಕ್ಷಿಣ ಏಷ್ಯಾದ ಹಿರಿಯ ಪತ್ರಕರ್ತರಾಗಿ ಹೆಚ್ಚು ಗುರುತಿಸಲ್ಪಟ್ಟಿದ್ದಾರೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News