×
Ad

ಮಹಾರಾಷ್ಟ್ರ ಸಿಎಂ ವಿರುದ್ಧ ಅಶ್ಲೀಲ ಟೀಕೆ: ಶಿವಸೇನೆ ಕಾರ್ಯಕರ್ತನ ವಿರುದ್ಧ ಪ್ರಕರಣ

Update: 2023-11-19 21:34 IST

ಏಕನಾಥ ಶಿಂದೆ | Photo: PTI

Read more at: https://www.deccanherald.com/india/maharashtra/man-booked-for-obscene-comment-on-social-media-against-maharashtra-cm-shinde-2776780

ಮುಂಬೈ,: ಫೇಸ್ಬುಕ್ ನಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆಯವರ ವಿರುದ್ಧ ಅಶ್ಲೀಲ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಕ್ಕಾಗಿ ಶಿವಸೇನೆ (ಠಾಕ್ರೆ) ಬಣದ ಕಾರ್ಯಕರ್ತನೋರ್ವನ ವಿರುದ್ಧ ಮುಂಬೈ ಪೋಲಿಸರು ಪ್ರಕರಣವನ್ನು ದಾಖಲಿಸಿದ್ದಾರೆ.

ಇಲ್ಲಿಯ ಅಂಧೇರಿ ವಿಧಾನಸಭಾ ಕ್ಷೇತ್ರದ ಶಿಂದೆ ನೇತೃತ್ವದ ಶಿವಸೇನೆಯ ಸಂಯೋಜಕಿ ದೂರು ಸಲ್ಲಿಸಿದ್ದರು.

ಆನ್ಲೈನ್ ನಲ್ಲಿ ಸುದ್ದಿ ವರದಿಗಳನ್ನು ಓದುತ್ತಿದ್ದಾಗ ಈ ಅಶ್ಲೀಲ ಹೇಳಿಕೆ ದೂರುದಾರರ ಗಮನಕ್ಕೆ ಬಂದಿತ್ತು,ಈ ಪೋಸ್ಟ್ ಮಹಿಳೆಯ ಘನತೆಯನ್ನು ಅವಮಾನಿಸುವ ಉದ್ದೇಶವನ್ನು ಹೊಂದಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.

ಇದು ಕಳೆದ ಮೂರು ದಿನಗಳಲ್ಲಿ ಶಿವಸೇನೆ (ಠಾಕ್ರೆ) ಬಣದ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News