×
Ad

ಒಡಿಶಾ | ಧರ್ಮಗುರುಗಳ ಮೇಲೆ ಗುಂಪು ದಾಳಿ ; ಚರ್ಚ್ ನಿಂದ 10 ಲಕ್ಷ ರೂ.ಲೂಟಿ

Update: 2024-06-15 22:24 IST

ರೂರ್ಕೇಲಾ : ಅಪರಿಚಿತ ದುಷ್ಕರ್ಮಿಗಳು ಇಬ್ಬರು ಕ್ರೈಸ್ತ ಧರ್ಮಗುರುಗಳ ಮೇಲೆ ಹಲ್ಲೆ ನಡೆಸಿ ಚರ್ಚ್‌ನಲ್ಲಿದ್ದ 10 ಲಕ್ಷ ರೂ.ಗಳನ್ನು ದೋಚಿರುವ ಘಟನೆ ಒಡಿಶಾದ ಸುಂದರಗಡ ಜಿಲ್ಲೆಯಲ್ಲಿ ನಡೆದಿದೆ.

ಶುಕ್ರವಾರ ತಡರಾತ್ರಿ ರೂರ್ಕೇಲಾ ಪಟ್ಟಣದಿಂದ 25 ಕಿ.ಮೀ.ದೂರದ ಝರ್‌ಬಹಾಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಚರ್ಚ್‌ನ ಮುಖ್ಯ ಪ್ರವೇಶದ್ವಾರದ ಬೀಗವನ್ನು ಮುರಿದ ದುಷ್ಕರ್ಮಿಗಳು ಧರ್ಮಗುರುಗಳ ಕೊಠಡಿಗೆ ತೆರಳಿ ಹಲ್ಲೆ ನಡೆಸಿದ್ದರು. ಗಾಯಗೊಂಡಿರುವ ಇಬ್ಬರೂ ಧರ್ಮಗುರುಗಳನ್ನು ರೂರ್ಕೇಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಸ್ಟೆಲ್ ಮತ್ತು ಶಾಲೆಯಿಂದ ಸಂಗ್ರಹಿಸಿದ್ದ 10 ಲಕ್ಷ ರೂ.ಚರ್ಚ್‌ನಲ್ಲಿತ್ತು. ಅದನ್ನು ದುಷ್ಕರ್ಮಿಗಳು ದೋಚಿದ್ದಾರೆ. ದುಷ್ಕರ್ಮಿಗಳ ಗುಂಪಿನಲ್ಲಿ 10-12 ಜನರಿದ್ದು, ಧರ್ಮಗುರುಗಳ ಮೇಲೆ ಲಾಠಿಗಳು ಮತ್ತು ಕಬ್ಬಿಣದ ಸರಳುಗಳಿಂದ ಹಲ್ಲೆ ನಡೆಸಿದ್ದರು ಎಂದು ಪೋಲಿಸರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News