×
Ad

ಒಡಿಶಾ: ಗುಂಡಿಕ್ಕಿಕೊಂಡು ಯೋಧನ ಆತ್ಮಹತ್ಯೆ

Update: 2024-03-03 22:35 IST

ಸಾಂದರ್ಭಿಕ ಚಿತ್ರ (PTI)

ಭುವನೇಶ್ವರ : ಒಡಿಶಾದ ಕೇಂದ್ರಪಾಡಾ ಜಿಲ್ಲೆಯ ಮಹಾಕಾಲಪಾಡಾ ಪೊಲೀಸ್ ಠಾಣಾ ವ್ಯಾಪ್ತಿಯ ಡಿಆರ್ಡಿಒದ ರಾಡಾರ್ ಅಬ್ಸರ್ವೇಟರಿ ಏರ್ ಸರ್ವೈಲನ್ಸ್ ಘಟಕದಲ್ಲಿ ಸೇನೆಯ ಯೋಧರೋರ್ವರು ತನ್ನ ಸರ್ವಿಸ್ ರೈಫಲ್ನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಯೋಧರನ್ನು ತಮಿಳುನಾಡು ಮೂಲದ ಸಿಪಾಯ್ ರಾಜಶೇಖರನ್ (35) ಎಂದು ಗುರುತಿಸಲಾಗಿದೆ. ರವಿವಾರ ನಸುಕಿನ ಎರಡು ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು,ಈ ವೇಳೆ ರಾಜಶೇಖರನ್ ಕರ್ತವ್ಯ ನಿರ್ವಹಿಸುತ್ತಿದ್ದರು.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ತಕ್ಷಣವೇ ಸಮೀಪದ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News