×
Ad

ಆಪರೇಷನ್ ವಿಜಯ್: ಮತ್ತೆ 286 ಭಾರತೀಯರು ಸ್ವದೇಶಕ್ಕೆ

Update: 2023-10-18 09:37 IST

Photo : twitter/DrSJaishankar

ಹೊಸದಿಲ್ಲಿ: ಯುದ್ಧಪೀಡಿತ ಇಸ್ರೇಲ್ ನಲ್ಲಿ ಸಿಕ್ಕಿಹಾಕಿಕೊಂಡು, ಸ್ವದೇಶಕ್ಕೆ ವಾಪಸ್ಸಾಗುವ ಪ್ರಯತ್ನದಲ್ಲಿರುವ ಭಾರತೀಯರನ್ನು ಕರೆತರುವ ಆಪರೇಷನ್ ವಿಜಯ್ ಕಾರ್ಯಾಚರಣೆಯ ಅಂಗವಾಗಿ ಮತ್ತೆ 286 ಮಂದಿಯನ್ನು ಟೆಲ್ ಅವೀವ್ ವಿಮಾನ ನಿಲ್ದಾಣದಿಂದ ಹೊಸದಿಲ್ಲಿಗೆ ವಿಶೇಷ ವಿಮಾನದಲ್ಲಿ ಕರೆ ತರಲಾಗಿದೆ. ಈ ಪೈಕಿ 18 ಮಂದಿ ನೇಪಾಳಿ ಪ್ರಜೆಗಳೂ ಸೇರಿದ್ದಾರೆ.

ಈ ವಿಷಯವನ್ನು x ಪೋಸ್ಟ್ ಹಂಚಿಕೊಂಡಿರುವ ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ಅರೀಂದಮ್ ಬಾಗ್ಚಿ, ಆಪರೇಷನ್ ವಿಜಯ್ ಅಡಿಯಲ್ಲಿ ಇಸ್ರೇಲ್ ನಿಂದ ಬಂದಿರುವ ಐದನೇ ವಿಶೇಷ ವಿಮಾನ ಇದಾಗಿದೆ ಎಂದು ಹೇಳಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಇವರನ್ನು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯಸಚಿವ ಎಲ್.ಮುರುಗನ್ ಸ್ವಾಗತಿಸುವ ಚಿತ್ರಗಳನ್ನು ಕೂಡಾ ಸಚಿವಾಲಯ ಹಂಚಿಕೊಂಡಿದೆ. ಸ್ಪೈಸ್ ಜೆಟ್ ಎ340 ವಿಮಾನ ಟೆಲ್ ಅವೀವ್ ನಲ್ಲಿ ಭಾನುವಾರ ಲ್ಯಾಂಡಿಂಗ್ ವೇಳೆ ತಾಂತ್ರಿಕ ಸಮಸ್ಯೆ ಎದುರಿಸಿತ್ತು. ಇದನ್ನು ಸರಿಪಡಿಸಲು ವಿಮಾನವನ್ನು ಜೋರ್ಡಾನ್ ಗೆ ಕಳುಹಿಸಲಾಗಿತ್ತು.

ಸಮಸ್ಯೆ ಸರಿಪಡಿಸಿದ ಬಳಿಕ ವಿಮಾನ ಮಂಗಳವಾರ ಟೆಲ್ ಅವೀವ್ ಗೆ ಆಗಮಿಸಿತ್ತು. ವಿಮಾನ ಸೋಮವಾರ ದೆಹಲಿಗೆ ಪ್ರಯಾಣ ಬೆಳೆಸಬೇಕಿತ್ತು. ಈ ವಿಮಾನದಲ್ಲಿ ಕೇರಳದ 22 ಮಂದಿ ಇದ್ದಾರೆ ಎಂದು ಕೇರಳ ಸರ್ಕಾರ ಹೇಳಿಕ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News