×
Ad

ಜಮ್ಮುಕಾಶ್ಮೀರ | ಗಡಿಯಲ್ಲಿ ಪಾಕ್ ಡ್ರೋನ್ ಪತ್ತೆ : ಭದ್ರತಾ ಪಡೆಗಳಿಂದ ಶೋಧ

Update: 2025-10-04 21:58 IST

Photo Credit: ANI

ಸಾಂಬಾ,ಅ.4: ಜಮ್ಮುಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಗಡಿ ಸಮೀಪದ ಮುಂಚೂಣಿ ಪ್ರದೇಶದ ಗ್ರಾಮವೊಂದರಲ್ಲಿ ಪಾಕಿಸ್ತಾನಿ ಡ್ರೋನ್ ಕಂಡುಬಂದ ಬಳಿಕ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.

ಶುಕ್ರವಾರ ತಡರಾತ್ರಿ ಪಾಕಿಸ್ತಾನದಿಂದ ಬಂದಿದ್ದ ಡ್ರೋನ್ ರೀತಿಯ ವಸ್ತುವೊಂದು ರಾಮಘಡ ವಿಭಾಗದ ನಂಗಾ ಗ್ರಾಮದ ಮೇಲೆ ಹಾರಾಡುತ್ತಿದ್ದು ಕಂಡು ಬಂದಿದ್ದು, ಇದು ಗಡಿ ಪ್ರದೇಶದಲ್ಲಿ ಆತಂಕವನ್ನು ಸೃಷ್ಟಿಸಿದೆ ಎಂದರು.

ಗಡಿಯಾಚೆಯಿಂದ ಮಾದಕ ದ್ರವ್ಯಗಳು ಅಥವಾ ಶಸ್ತ್ರಾಸ್ತ್ರಗಳನ್ನು ಕೆಳಕ್ಕೆ ಬೀಳಿಸಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಪಡೆಗಳು ಮತ್ತು ಪೊಲೀಸರನ್ನು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಸುಪಾಸಿನ ಗ್ರಾಮಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News