ಪೇರೆಂಟಿಂಗ್ : ಪ್ರವಾದಿ ಮಾದರಿಗಳು| ಶಮಾಇಲುರ್ರಸೂಲ್ ಅಧ್ಯಯನ ಕೋರ್ಸ್ ಗೆ ನೋಂದಣಿ ಪ್ರಾರಂಭ
Update: 2025-07-31 12:41 IST
ಕೋಝಿಕ್ಕೋಡ್: ಡಾ. ಮುಹಮ್ಮದ್ ಅಬ್ದುಲ್ ಹಕೀಮ್ ಅಝ್ಹರಿ ನೇತೃತ್ವದ ಶಮಾಇಲುರ್ರಸೂಲ್ ಅಧ್ಯಯನ ಕೋರ್ಸ್ ನ ಐದನೇ ಆವೃತ್ತಿಯನ್ನು ಘೋಷಿಸಲಾಗಿದೆ. ಈ ಬಾರಿ ಪೇರೆಂಟಿಗ್ ; ಪ್ರವಾದಿ ಮಾದರಿಗಳು ಎಂಬ ವಿಷಯದ ಕುರಿತು ತರಗತಿಗಳು ನಡೆಯಲಿವೆ.
ಪ್ರವಾದಿಯವರ ಜೀವನದ ಬಗ್ಗೆ ತಿಳಿದುಕೊಳ್ಳಲು ಮತ್ತು ಆ ಮೂಲಕ ಹೊಸ ಜೀವನ ಕ್ರಮವನ್ನು ರೂಪಿಸಲು ಅವಕಾಶವನ್ನು ಒದಗಿಸುವುದು ಈ ಕೋರ್ಸ್ ನ ಉದ್ದೇಶವಾಗಿದೆ.
ಏಳು ದಿನಗಳ ಕಾಲ ಕೋರ್ಸ್ ನಡೆಯಲಿದ್ದು, ಮೊದಲ ಆರು ದಿನಗಳು ಆನ್ಲೈನ್ ನಲ್ಲಿ ಹಾಗೂ ಕೊನೆಯ ದಿನ ಮರ್ಕಝ್ ನಾಲೆಜ್ ಸಿಟಿಯಲ್ಲಿ ಉಸ್ತಾದರ ಸಮ್ಮುಖದಲ್ಲಿ ತರಗತಿಗಳು ನಡೆಯಲಿವೆ. ಆ ದಿನದಂದು ಕೋರ್ಸ್ ಪೂರ್ತಿಗೊಳಿಸಿದವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತದೆ.
ಮಲಯಾಳಂ ಮತ್ತು ಉರ್ದು ಭಾಷೆಯಲ್ಲಿ ನಡೆಯಲಿರುವ ಈ ತರಗತಿಗಳಲ್ಲಿ ಸ್ತ್ರೀ ಪುರುಷರಿಗೆ ವಯೋಮಿತಿಯಿಲ್ಲದೇ ಭಾಗವಹಿಸಬಹುದಾಗಿದೆ.
ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ: +91 89438 75376