×
Ad

ಪಾಸ್ ಪೋರ್ಟ್ ಕವರ್ ವಿರೂಪಗೊಂಡರೆ ಸ್ವೀಕಾರಾರ್ಹವಲ್ಲ: ಅಧಿಕಾರಿಗಳು

Update: 2023-09-01 07:43 IST

ಹೈದರಾಬಾದ್: ಭಾರತೀಯ ಪಾಸ್ ಪೋರ್ಟ್ ಗಳನ್ನು ಜಾಹೀರಾತು ವೇದಿಕೆಯಾಗಿ ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನವನ್ನು ತಡೆಯುವ ಸಲುವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೆಲ ಕಟ್ಟುನಿಟ್ಟಿನ ಸೂಚನೆಗಳನ್ನು ಹೊರಡಿಸಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಟ್ರಾವೆಲ್ ಏಜೆಂಟರು ಭಾರತೀಯ ಪಾಸ್ ಪೋರ್ಟ್ ಕವರ್  ಮೇಲೆ ತಮ್ಮ ಏಜೆನ್ಸಿ ಅಥವಾ ಕಂಪನಿಯ ಸ್ಟಿಕ್ಕರ್ ಗಳನ್ನು ಹಚ್ಚಿ ವಿರೂಪಗೊಳಿಸುವ ಅಪಾಯಕಾರಿ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಹೈದರಾಬಾದ್ ನ ಎಂಇಎ ಶಾಖಾ ಕಾರ್ಯಾಲಯದ ಮುಖ್ಯಸ್ಥ ಹಾಗೂ ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿ ದಾಸರಿ ಬಾಲಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕ್ರಮ ಪಾಸ್ ಪೋರ್ಟ್ ನ ಘನತೆಗೆ ಕುಂದು ಉಂಟು ಮಾಡುವುದಲ್ಲದೇ, ಪಾಸ್ ಪೋರ್ಟ್ ನಿರ್ವಹಣೆಗೆ ಸಂಬಂಧಿಸಿದ ಕೇಂದ್ರ ಸರ್ಕಾರಿ ಮಾರ್ಗಸೂಚಿಗೆ ಕೂಡಾ ವಿರುದ್ಧ ಎಂದು ಹೇಳಿದ್ದಾರೆ.

"ಭಾರತೀಯ ಪಾಸ್ ಪೋರ್ಟ್ ನ ಹೊರ ರಕ್ಷಾಕವಚವು ಅಶೋಕ ಚಕ್ರವನ್ನು ಒಳಗೊಂಡ ರಾಷ್ಟ್ರಲಾಂಛನವನ್ನು ಹೊಂದಿದೆ. ಜತೆಗೆ ಇದು ಅಧಿಕೃತತೆ ಮತ್ತು ಸಮಗ್ರತೆಯನ್ನು ಖಾತರಿಪಡಿಸುವ ಹಲವು ಭದ್ರತಾ ಲಕ್ಷಣಗಳನ್ನು ಕೂಡಾ ಹೊಂದಿದೆ. ಇದರ ಮೇಲೆ ಟ್ರಾವೆಲ್ ಏಜೆಂಟರು ಹೆಚ್ಚುವರಿ ಏನನ್ನಾದರೂ ಅಂಟಿಸುವುದು ಮತ್ತು ಸ್ಟಿಕ್ಕರ್ ಹಚ್ಚುವುದರಿಂದ ರಾಷ್ಟ್ರಲಾಂಛನ ಮರೆಯಾಗುವುದು ಮಾತ್ರವಲ್ಲದೇ ಭದ್ರತಾ ವಿಶೇಷತೆಗಳು ಕೂಡಾ ವಿರೂಪಗೊಳ್ಳುತ್ತವೆ. ಇದು ಅಧಿಕೃತತೆಯ ದೃಢೀಕರಣಕ್ಕೆ ಅಡ್ಡಿಯಾಗುತ್ತದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಇದರಿಂದ ಭಾರತೀಯ ಪಾಸ್ ಪೋರ್ಟ್ ನ ನೈಜತೆಯನ್ನು ಅಳೆಯಲು ಕಷ್ಟವಾಗುತ್ತದೆ ಹಾಗೂ ಭಾರತೀಯ ಪ್ರವಾಸಿಗಳಿಗೆ ಇಮಿಗ್ರೇಶನ್ ಕೇಂದ್ರಗಳಲ್ಲಿ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News