×
Ad

ಪಠಾಣ್ ಕೋಟ್ ಅಥವಾ ರಾಜೌರಿಗಳಲ್ಲಿ ಭಯೋತ್ಪಾದಕರಿಂದ ಆತ್ಮಹತ್ಯಾ ದಾಳಿಗಳ ಸುದ್ದಿ ಸಂಪೂರ್ಣ ಸುಳ್ಳು:‌ ಸೇನೆ

Update: 2025-05-09 14:48 IST

ಸಾಂದರ್ಭಿಕ ಚಿತ್ರ | PTI

 

ಹೊಸದಿಲ್ಲಿ: ಪಂಜಾಬಿನ ಪಠಾಣಕೋಟ್ ಅಥವಾ ಜಮ್ಮುಕಾಶ್ಮೀರದ ರಾಜೌರಿಯಲ್ಲಿ ಭಯೋತ್ಪಾದಕರು ಆತ್ಮಹತ್ಯಾ ದಾಳಿಗಳನ್ನು ನಡೆಸಿದ್ದಾರೆ ಎಂಬ ಸುದ್ದಿ ವರದಿಗಳು ಸಂಪೂರ್ಣವಾಗಿ ಸುಳ್ಳು ಎಂದು ಸೇನೆಯ ಅಧಿಕಾರಿಗಳು ಗುರುವಾರ ಸ್ಪಷ್ಟಪಡಿಸಿದ್ದಾರೆ.

ಭಯೋತ್ಪಾದಕರಿಂದ ಆತ್ಮಹತ್ಯಾ ದಾಳಿಗಳು ನಡೆದಿವೆ ಎಂದು ಕೆಲವು ಮಾಧ್ಯಮಗಳು ಸುಳ್ಳು ಸುದ್ದಿ ಹರಡಿತ್ತು. ಈ ವರದಿಗಳ ನಡುವೆಯೇ ಈ ಸ್ಪಷ್ಟನೆ ಹೊರಬಿದ್ದಿದೆ.

ಭಾರತದೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ ಪಾಕಿಸ್ತಾನವು ಗುರುವಾರ ರಾತ್ರಿ ಜಮ್ಮುವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಆದರೆ ಪಾಕಿಸ್ತಾನದ ಕ್ಷಿಪಣಿ ದಾಳಿಗಳನ್ನು ಭಾರತ ತಡೆದಿದೆ.

ಪಾಕಿಸ್ತಾನವು ಸತ್ವಾರಿ,ಸಾಂಬಾ,ಆರ್‌ಎಸ್ ಪುರ ಮತ್ತು ಅರ್ನಿಯಾ ವಲಯಗಳತ್ತ ಎಂಟು ಕ್ಷಿಪಣಿಗಳನ್ನು ಹಾರಿಸಿದ್ದು,ಇವುಗಳನ್ನು ಪ್ರತಿಬಂಧಿಸಲಾಗಿದೆ. ಕಿಷ್ತವಾರ್,ಅಖ್ನೂರ್,ಸಾಂಬಾ ಮತ್ತು ಜಮ್ಮುಗಳಲ್ಲಿ ಬ್ಲ್ಯಾಕ್‌ಔಟ್‌ಗಳನ್ನು ಜಾರಿಗೊಳಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News