×
Ad

ಉಪ ರಾಷ್ಟ್ರಪತಿ ಕಾರ್ಯಾಲಯದ ಉಪ ಚುನಾವಣಾ ಆಯುಕ್ತರಾಗಿ ಪವನ್ ಕುಮಾರ್ ಶರ್ಮ, ಜಂಟಿ ಕಾರ್ಯದರ್ಶಿಯಾಗಿ ವಿ.ಲಲಿತಾಲಕ್ಷ್ಮಿ ನೇಮಕ

Update: 2025-09-13 22:23 IST

PC | PTI

ಹೊಸದಿಲ್ಲಿ: ಉಪ ರಾಷ್ಟ್ರಪತಿಗಳ ಕಾರ್ಯಾಲಯದ ಉಪ ಚುನಾವಣಾ ಆಯುಕ್ತರು ಹಾಗೂ ಜಂಟಿ ಕಾರ್ಯದರ್ಶಿಗಳನ್ನಾಗಿ ಕ್ರಮವಾಗಿ ಹಿರಿಯ ಐಎಎಸ್ ಅಧಿಕಾರಿಗಳಾದ ಪವನ್ ಕುಮಾರ್ ಶರ್ಮ ಹಾಗೂ ವಿ.ಲಲಿತಾಲಕ್ಷ್ಮಿಯವರನ್ನು ಶನಿವಾರ ನೇಮಕ ಮಾಡಲಾಗಿದೆ ಎಂದು ಅಧಿಕೃತ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಪವನ್ ಕುಮಾರ್ ಶರ್ಮ 1999ನೇ ಬ್ಯಾಚ್ ನ ಮಧ್ಯಪಪ್ರದೇಶ ಕೇಡರ್ ಐಎಎಸ್ ಅಧಿಕಾರಿಯಾಗಿದ್ದರೆ, ಲಲಿತಾಲಕ್ಷ್ಮಿ 2008ನೇ ಬ್ಯಾಚ್ ನ ಪಶ್ಚಿಮ ಬಂಗಾಳ ಕೇಡರ್ ಐಎಎಸ್ ಅಧಿಕಾರಿಯಾಗಿದ್ದಾರೆ.

ರಕ್ಷಣಾ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿರುವ ಪವನ್ ಕುಮಾರ್ ಶರ್ಮರನ್ನು ಸೇವಾ ಜ್ಯೇಷ್ಠತೆ ಆಧಾರದಲ್ಲಿ ಉಪ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿದ್ದು, ಭಾರತ ಸರಕಾರದ ಹೆಚ್ಚುವರಿ ಕಾರ್ಯದರ್ಶಿ ದರ್ಜೆಯ ವೇತನ ಪಡೆಯಲಿದ್ದಾರೆ ಎಂದು ಸಿಬ್ಬಂದಿಗಳ ಸಚಿವಾಲಯದ ಆದೇಶದಲ್ಲಿ ಹೇಳಲಾಗಿದೆ.

ಜಂಟಿ ಕಾರ್ಯದರ್ಶಿಗಳ ಹಂತದಲ್ಲೂ ಪ್ರಮುಖ ಸ್ಥಳ ಬದಲಾವಣೆ ಮಾಡಿರುವ ಕೇಂದ್ರ ಸರಕಾರ, 35 ಮಂದಿ IAS ಅಧಿಕಾರಿಗಳನ್ನು ವಿವಿಧ ಸರಕಾರಿ ಸಂಸ್ಥೆಗಳಿಗೆ ನೇಮಕ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News