×
Ad

ಪೇಟಿಎಂ ನಿರ್ದೇಶಕ ಮಂಜು ಅಗರ್ವಾಲ್ ರಾಜಿನಾಮೆ

Update: 2024-02-12 15:18 IST

ಬೆಂಗಳೂರು: ಹಣಕಾಸು ತಂತ್ರಜ್ಞಾನ ಸಂಸ್ಥೆ ಪೇಟಿಎಂನ ಬ್ಯಾಂಕಿಂಗ್ ವಿಭಾಗದ ಸ್ವತಂತ್ರ ನಿರ್ದೇಶಕ ಮಂಜು ಅಗರ್ವಾಲ್ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಸೋಮವಾರ ಪೇಟಿಎಂ ದೃಢಪಡಿಸಿದೆ.

ತಮ್ಮ ವೈಯಕ್ತಿಕ ಕಾರಣಗಳಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ನಿರ್ದೇಶಕ ಮಂಜು ಅಗರ್ವಾಲ್, ಫೆ. 1ರಂದು ನಿರ್ದೇಶಕ ಮಂಡಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ ಎಂದು ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿರುವ ಮಾಹಿತಿಯಲ್ಲಿ ಪೇಟಿಎಂ ತಿಳಿಸಿದೆ.

ತನ್ನ ಬಹುತೇಕ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಬೇಕು ಎಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದ ಒಂದು ವಾರದ ನಂತರ, ನಿಯಂತ್ರಣ ವಿಷಯಗಳನ್ನು ಅನುಸರಿಸಲು ತಾನು ಸಲಹಾ ಸಮಿತಿಯೊಂದನ್ನು ರಚಿಸುವುದಾಗಿ ಶುಕ್ರವಾರ ಪೇಟಿಎಂ ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News