ಜನರು ಬಿಜೆಪಿಗೆ ಪಾಠ ಕಲಿಸಲಿದ್ದಾರೆ | ಕೇಜ್ರಿವಾಲ್ ಬಂಧನ ಕುರಿತು ಅಖಿಲೇಶ ಯಾದವ್
ಅಖಿಲೇಶ ಯಾದವ್ | Photo: PTI
ಲಕ್ನೋ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನಕ್ಕಾಗಿ ಬಿಜೆಪಿ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿಯನ್ನು ನಡೆಸಿದ ಸಮಾಜವಾದಿ ಪಾರ್ಟಿಯ ಮುಖ್ಯಸ್ಥ ಅಖಿಲೇಶ ಯಾದವ್, ಅವರು (ಬಿಜೆಪಿ) ನಾಯಕರನ್ನು ಜೈಲಿಗೆ ತಳ್ಳಬಹುದು, ಜನತೆಯನ್ನಲ್ಲ. ಜನರು ಅವರಿಗೆ ಪಾಠವನ್ನು ಕಲಿಸಲಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿಯನ್ನು ಜೈಲಿಗೆ ಕಳಹಿಸುವುದರಿಂದ ಮತ್ತು ಸುದ್ದಿಗಳನ್ನು ನಿಯಂತ್ರಿಸುವುದರಿಂದ ಅವರಿಗೆ ಯಾವುದೇ ಲಾಭವಾಗುವುದಿಲ್ಲ,ಏಕೆಂದರೆ ಅವರು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ ಮತ್ತು ಸತ್ಯವನ್ನು ಹೇಳಲು ಬಯಸುವವರ ಧ್ವನಿಗಳನ್ನು ಅಡಗಿಸುತ್ತಿದ್ದಾರೆ ಎಂದು ಸುದ್ದಿಗಾರರೊಡನೆ ಮಾತನಾಡಿದ ಅಖಿಲೇಶ ಹೇಳಿದರು.
ಸಮಯವು ಅತ್ಯಂತ ಮಹತ್ವದ್ದಾಗಿದೆ ಮತ್ತು ಸಮಯ ಬಂದಾಗ ಜನರು ಬಿಜೆಪಿಗೆ ಪಾಠ ಕಲಿಸಲಿದ್ದಾರೆ ಎಂದರು.
ಸುಳ್ಳು ಪ್ರಕರಣಗಳನ್ನು ದಾಖಲಿಸುವುದರಲ್ಲಿ ಬಿಜೆಪಿಯು ‘ಬ್ರಹ್ಮಾಂಡ ದಾಖಲೆ’ಯನ್ನು ಮಾಡಿದೆ ಎಂದು ಅವರು ಆರೋಪಿಸಿದರು.