ಮುಂಬೈ: ಪೈಲಟ್ ನಿಂದ ಗಗನ ಸಖಿಯ ಅತ್ಯಾಚಾರ ಆರೋಪ
Update: 2025-07-20 20:47 IST
ಸಾಂದರ್ಭಿಕ ಚಿತ್ರ (PTI)
ಠಾಣೆ, ಜು. 20: ಖಾಸಗಿ ವಿಮಾನ ಯಾನ ಸಂಸ್ಥೆಯ 23 ವರ್ಷದ ಗಗನ ಸಖಿಯನ್ನು ಆಕೆಯ ಸಹೋದ್ಯೋಗಿ ಹಾಗೂ ಪೈಲಟ್ ಮುಂಬೈ ಸಮೀಪದ ಮೀರಾ ರಸ್ತೆಯಲ್ಲಿರುವ ಆತನ ನಿವಾಸದಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಘಟನೆ ಕಳೆದ ವಾರ ಮುಂಬೈಯಲ್ಲಿ ನಡೆದಿದೆ. ಅವರಿಬ್ಬರು ಜೊತೆಯಾಗಿ ವಿಮಾನದಲ್ಲಿ ಲಂಡನ್ ಗೆ ಪ್ರಯಾಣಿಸಿದ್ದರು. ಅನಂತರ ಮುಂಬೈಗೆ ಹಿಂದಿರುಗಿದ್ದರು. ಬಳಿಕ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಮೀರಾ ರಸ್ತೆಗೆ ತೆರಳಿದ್ದರು.
‘‘ಪೈಲಟ್ ನನ್ನ ಮನೆಗೆ ತೆರಳುವ ಮುನ್ನ ಆತನ ನಿವಾಸಕ್ಕೆ ಭೇಟಿ ನೀಡುವಂತೆ ಕೇಳಿಕೊಂಡಿದ್ದ. ಅದರಂತೆ ನಾವಿಬ್ಬರು ಆತನ ಮನೆಗೆ ತೆರಳಿದೆವು. ನಾವು ತಲುಪಿದಾಗ ಅಲ್ಲಿ ಯಾರೂ ಅಲ್ಲಿ ಯಾರೂ ಇರಲಿಲ್ಲ. ಅಲ್ಲಿ ಆತ ನನ್ನ ಮೇಲೆ ಅತ್ಯಾಚಾರ ಎಸಗಿದ’’ ಎಂದು ಗಗನ ಸಖಿ ಆರೋಪಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿ ನವಾಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.