×
Ad

ಬಿಜೆಪಿ ಅಯೋಧ್ಯೆಯಲ್ಲಿ ಸೋತಿರುವುದರಿಂದ ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು: ಮಮತಾ ಬ್ಯಾನರ್ಜಿ

Update: 2024-06-04 21:45 IST

ಮಮತಾ ಬ್ಯಾನರ್ಜಿ |  PC : PTI

ಕೋಲ್ಕತ್ತಾ: ಬಿಜೆಪಿ ಅಯೋಧ್ಯೆಯಲ್ಲಿ ಪರಾಭವಗೊಂಡಿರುವುದರಿಂದ ಪ್ರಧಾನಿ ಮೋದಿ ತಮ್ಮ ವಿಶ್ವಾಸಾರ್ಹತೆ ಕಳೆದುಕೊಂಡಿದ್ದು, ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, “ಪ್ರಧಾನಿ ಮೋದಿ ತಮ್ಮ ಬಹುಮತ ಕಳೆದುಕೊಂಡಿರುವುದರಿಂದ ನನಗೆ ಸಂತಸವಾಗಿದೆ. ಪ್ರಧಾನಿಯು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ. ನಾವು ಈ ಬಾರಿ 400ರ ಗಡಿ ದಾಟುವುದಾಗಿ ಅವರು ಹೇಳಿದ್ದರಾದ್ದರಿಂದ ಅವರು ಈ ಕೂಡಲೇ ರಾಜೀನಾಮೆ ಸಲ್ಲಿಸಬೇಕು” ಎಂದು ಒತ್ತಾಯಿಸಿದ್ದಾರೆ.

“ಇಷ್ಟೆಲ್ಲ ದೌರ್ಜನ್ಯ, ಭಾರಿ ಮೊತ್ತದ ವೆಚ್ಚ, ಮೋದಿ ಹಾಗೂ ಅಮಿತ್ ಶಾರ ಈ ಬಗೆಯ ದುರಹಂಕಾರದ ಹೊರತಾಗಿಯೂ ಇಂಡಿಯಾ ಮೈತ್ರಿಕೂಟ ಗೆಲುವು ಸಾಧಿಸಿದೆ ಹಾಗೂ ಮೋದಿ ಪರಾಭವಗೊಂಡಿದ್ದಾರೆ. ಅವರು ಅಯೋಧ್ಯೆಯಲ್ಲೂ ಪರಾಭವಗೊಂಡಿದ್ದಾರೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News