×
Ad

ಪಿಎಂ ಸೂರ್ಯಘರ್ ಯೋಜನೆ : ವಿಎನ್‌ಎಂ ಜಾರಿಗೊಳಿಸಿದ ದೇಶದ ಮೊದಲ ನಗರ ರಾಯ್‌ಪುರ

Update: 2025-10-15 19:58 IST

Photo Credit : india.gov.in

ರಾಯ್‌ಪುರ,ಅ.15: ಛತ್ತೀಸ್‌ಗಢದ ರಾಯಪುರ ನಗರದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯಡಿ ವಸತಿ ಸಂಕೀರ್ಣವೊಂದರಲ್ಲಿ ವರ್ಚುವಲ್ ನೆಟ್ ಮೀಟರಿಂಗ್‌ನ್ನು(ವಿಎನ್‌ಎಂ) ಯಶಸ್ವಿಯಾಗಿ ಜಾರಿಗೊಳಿಸಿದೆ.

ಸೌರ ವಿದ್ಯುತ್ ಯೋಜನೆಯಡಿ ವಿಎನ್‌ಎಂನಿಂದಾಗಿ ಸೀಮಿತ ಮೇಲ್ಛಾವಣಿ ಸ್ಥಳಾವಕಾಶವನ್ನು ಹೊಂದಿರುವ ಅಪಾರ್ಟಮೆಂಟ್ ನಿವಾಸಿಗಳು, ವಸತಿ ಸಂಕೀರ್ಣಗಳು ಮತ್ತು ಸರಕಾರಿ ಸಂಸ್ಥೆಗಳಿಗೆ ಒಂದೇ ಸೌರ ವಿದ್ಯುತ್ ಸ್ಥಾವರದ ಪ್ರಯೋಜನಗಳನ್ನು ಹಂಚಿಕೊಳ್ಳಲು ತಮ್ಮ ವಿದ್ಯುತ್ ಬಿಲ್‌ಗಳನ್ನು ತಗ್ಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಕೊಡುಗೆಯನ್ನೂ ಸಲ್ಲಿಸಿದಂತಾಗುತ್ತದೆ.

ರಾಯ್‌ಪುರ ವಸತಿ ಸಂಕೀರ್ಣದಲ್ಲಿ ವಿಎನ್‌ಎಂ ಅನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಭಾರತದ ಮೊದಲ ನಗರವಾಗಿದೆ. ರಾಜ್ಯ ಸರಕಾರ ಈ ಮಾದರಿಯನ್ನು ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸಲಿದೆ ಎಂದು ಪಿಎಂ ಸೂರ್ಯಘರ್ ಯೋಜನೆಯ ರಾಜ್ಯ ನೋಡಲ್ ಅಧಿಕಾರಿ ಬಿಂಬಿಸಾರ್ ಸುದ್ದಿಸಂಸ್ಥೆಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News