×
Ad

ಪೋಕ್ಸೋ ಪ್ರಕರಣ: ದೀಪಕ್‌ ಚೌರಾಸಿಯಾ, ಚಿತ್ರಾ ತ್ರಿಪಾಠಿ ಸಹಿತ 8 ಪತ್ರಕರ್ತರ ವಿರುದ್ಧ ಆರೋಪ ರೂಪಿಸಿದ ನ್ಯಾಯಾಲಯ

Update: 2023-08-29 21:51 IST

ದೀಪಕ್‌ ಚೌರಾಸಿಯಾ, ಚಿತ್ರಾ ತ್ರಿಪಾಠಿ | Photo: Youtube

ಗುರುಗ್ರಾಮ: ಹರ್ಯಾಣದ ಗುರುಗ್ರಾಮದ ವಿಶೇಷ ನ್ಯಾಯಾಲಯವು ಪೋಕ್ಸೋ ಪ್ರಕರಣದಲ್ಲಿ ಖ್ಯಾತ ಟಿವಿ ನಿರೂಪಕರಾದ ದೀಪಕ್‌ ಚೌರಾಸಿಯಾ, ಚಿತ್ರಾ ತ್ರಿಪಾಠಿ ಮತ್ತು ಅಜಿತ್‌ ಅಂಜುಮ್‌ ಸೇರಿದಂತೆ ಎಂಟು ಪತ್ರಕರ್ತರ ವಿರುದ್ಧ ಕಳೆದ ವಾರ ಆರೋಪಗಳನ್ನು ರೂಪಿಸಿದೆ.

ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಎಂಟು ವರ್ಷದ ಬಾಲಕಿ ಹಾಗೂ ಆಕೆಯ ಕುಟುಂಬದ ಗುರುತನ್ನು ಬಹಿರಂಗಪಡಿಸಿದಕ್ಕಾಗಿ ಮತ್ತು ವಿಡಿಯೋವನ್ನು ತಿರುಚಿ ಪ್ರಸಾರ ಮಾಡಿರುವ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

News24ನ ಅಜಿತ್‌ ಅಂಜುಮ್‌, ನಿರೂಪಕ  ಸೊಹೈಲ್‌, India News ನ ಮುಖ್ಯ ಸಂಪಾದಕ ಚೌರಾಸಿಯಾ, ವರದಿಗಾರ ಸುನಿಲ್‌ ದತ್‌, ಚಿತ್ರಾ ತ್ರಿಪಾಠಿ, ರಾಶಿದ್‌ ಹಶ್ಮಿ, ಲಲಿತ್‌ ಸಿಂಗ್‌, ಅಭಿನವ್‌ ರಾಜ್‌ ವಿರುದ್ಧ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಆರೋಪಿಗಳು ಅಪ್ರಾಪ್ತ ಬಾಲಕಿ ಮತ್ತು ಆಕೆಯ ಕುಟುಂಬವನ್ನು ಒಳಗೊಂಡ ತಿರುಚಿದ ವೀಡಿಯೊವನ್ನು ರಚಿಸಲು ಮತ್ತು ಪ್ರಸಾರ ಮಾಡಲು ಸಂಚು ರೂಪಿಸಿ, ನಂತರ ಅದನ್ನು ಸುದ್ದಿ ವಾಹಿನಿಗಳಲ್ಲಿ ಪ್ರಸಾರ ಮಾಡಿದ್ದಾರೆ. ಈ ಕೃತ್ಯ ಸಂತ್ರಸ್ತೆ ಹಾಗೂ ಆಕೆಯ ಕುಟುಂಬದ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎನ್ನಲಾಗಿದೆ.

ಎಡಿಟೆಡ್ ವೀಡಿಯೋವನ್ನು ತಮ್ಮ ಸುದ್ದಿ ವಾಹಿನಿಗಳಲ್ಲಿ ಉದ್ದೇಶಪೂರ್ವಕವಾಗಿ ಪ್ರಸಾರ ಮಾಡಿ, ಅಪ್ರಾಪ್ತ ಬಾಲಕಿಯನ್ನು ಅನುಚಿತವಾಗಿ ಮತ್ತು ಅಶ್ಲೀಲವಾಗಿ ಚಿತ್ರಿಸಿದ್ದಾರೆ ಎಂಬ ಆರೋಪವೂ ಅವರ ಮೇಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News