×
Ad

ಚುನಾವಣೆಯಲ್ಲಿ ಪತ್ನಿ ಸ್ಪರ್ಧಿಸುವ ಸಾಧ್ಯತೆಯು ಬಿಜೆಪಿಯ ಕಲ್ಪನೆ: ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್

Update: 2024-01-02 21:27 IST

ಹೇಮಂತ್ ಸೊರೇನ್‌ | Photo: PTI  

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಅವರು ಮಂಗಳವಾರ ತಮ್ಮ ಪತ್ನಿ ಕಲ್ಪನಾ ಸೊರೇನ್‌ ರಾಜ್ಯದ ಗಂಡೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ. ಇದು ಬಿಜೆಪಿಯ "ಸಂಪೂರ್ಣ ಕಲ್ಪನೆ" ಎಂದು ಬಣ್ಣಿಸಿದ್ದಾರೆ.

ಈಗ ಹರಡುತ್ತಿರುವ ಊಹಾಪೋಹಗಳಲ್ಲಿ ಸ್ವಲ್ಪವೂ ಸತ್ಯವಿಲ್ಲ ಎಂದು ಸೋರೆನ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದರು. “ಮುಂದಿನ ದಿನಗಳಲ್ಲಿ ನನ್ನ ಪತ್ನಿ ಸ್ಪರ್ಧಿಸುವ ಸಾಧ್ಯತೆ ಬಿಜೆಪಿಯ ಸಂಪೂರ್ಣ ಕಲ್ಪನೆಯಾಗಿದೆ... ಅವರಿಗೆ ಅಧಿಕಾರ ಹಸ್ತಾಂತರಿಸುವ ಊಹಾಪೋಹಗಳು ಸುಳ್ಳು. ಇದು ಬಿಜೆಪಿ ಹೆಣೆದ ಕಥೆ” ಎಂದು ಅವರು ಹೇಳಿದರು.

ಜಾರಿ ನಿರ್ದೇಶನಾಲಯವು ಇತ್ತೀಚೆಗಷ್ಟೇ ಮುಖ್ಯಮಂತ್ರಿಗೆ ಸಮನ್ಸ್ ನೀಡಿದ್ದು, ಸೋಮವಾರ ಆಡಳಿತಾರೂಢ ಜೆಎಂಎಂನ ಗಂಡೆ ಶಾಸಕ ಸರ್ಫರಾಜ್ ಅಹ್ಮದ್ ಅವರು ಹಠಾತ್ ರಾಜೀನಾಮೆ ನೀಡಿರುವುದು ಊಹಾಪೋಹಗಳಿಗೆ ಕಾರಣವಾಗಿದೆ. ಈಡಿ ಸಮನ್ಸ್‌ಗೆ ಸಂಬಂಧಿಸಿದಂತೆ ಯಾವುದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅಧಿಕಾರ ತ್ಯಜಿಸಬೇಕಾಗಿ ಬಂದರೆ, ಪತ್ನಿ ಕಲ್ಪನಾ ಸೊರೇನ್‌ ಗಂಡೇ ಕ್ಷೇತ್ರದಿಂದ ಸ್ಪರ್ಧಿಸಲು ಅಹ್ಮದ್ ಅವರು ರಾಜೀನಾಮೆ ನೀಡಿದರು ಎಂದು ಪ್ರತಿಪಕ್ಷ ಬಿಜೆಪಿ ಹೇಳಿಕೊಂಡಿದೆ.

81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಚರ್ಚಿಸಲು ಆಡಳಿತಾರೂಢ ಜೆಎಂಎಂ ನೇತೃತ್ವದ ಒಕ್ಕೂಟವು ತನ್ನ ಶಾಸಕರ ಸಭೆಯನ್ನು ಬುಧವಾರ ಕರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News