×
Ad

ಜೆಡಿಯು ಸೇರ್ಪಡೆಯಾದ ಕ್ರಿಕೆಟಿಗ ಇಶಾನ್ ಕಿಶನ್ ತಂದೆ ಪ್ರಣವ್ ಪಾಂಡೆ

Update: 2024-10-28 14:28 IST

PC ; ANI 

ಪಾಟ್ನಾ: ಕ್ರಿಕೆಟಿಗ ಇಶಾನ್ ಕಿಶನ್ ಅವರ ತಂದೆ ಪ್ರಣವ್ ಪಾಂಡೆ ಇಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸೇರ್ಪಡೆಯಾದರು. ಜೆಡಿಯು ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ ಸಂಜಯ್ ಝಾ ಸಮ್ಮುಖದಲ್ಲಿ ಅವರು ಜೆಡಿಯು ಸದಸ್ಯತ್ವ ಸ್ವೀಕರಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಪ್ರಣವ್ ಪಾಂಡೆ, “ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಪಕ್ಷವನ್ನು ಬಲಪಡಿಸಲು ಅರ್ಪಣಾ ಮನೋಭಾಗದಿಂದ ದುಡಿಯುತ್ತೇನೆ” ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಜೆಡಿಯು ಸಂಸದ ಸಂಜಯ್ ಝಾ, “ಪ್ರಣವ್ ಪಾಂಡೆ ನಿತೀಶ್ ಕುಮಾರ್ ಮೇಲಿರುವ ವಿಶ್ವಾಸದಿಂದ ನಮ್ಮ ಜೆಡಿಯು ಪಕ್ಷವನ್ನು ಸೇರ್ಪಡೆಯಾಗುತ್ತಿದ್ದಾರೆ. ಇದರಿಂದ ಮಗಧ್ ಪ್ರಾಂತ್ಯದಲ್ಲಿ ನಮ್ಮ ಪಕ್ಷದ ಸಂಘಟನೆ ಸಾಕಷ್ಟು ಬಲಿಷ್ಠಗೊಳ್ಳಲಿದೆ” ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News