×
Ad

ಎಮಿರೇಟ್ಸ್ ವಾಯು ಯಾನ ಸಂಸ್ಥೆಯಿಂದ ಭಾರತೀಯ ಪ್ರಯಾಣಿಕರಿಗೆ ಪೂರ್ವ ಅನುಮೋದಿತ ವೀಸಾ ಸೌಲಭ್ಯ

Update: 2024-02-05 20:53 IST

Photo : PTI 

ಹೊಸದಿಲ್ಲಿ: ಯುಎಇಯ ಎರಡು ಪ್ರಮುಖ ವಿಮಾನ ಯಾನ ಸಂಸ್ಥೆಗಳ ಪೈಕಿ ಒಂದಾದ ಎಮಿರೇಟ್ಸ್ ವಿಮಾನ ಸಂಸ್ಥೆಯು ವಿಎಫ್ ಎಸ್ ಗ್ಲೋಬಲ್ ಸಂಸ್ಥೆಯ ಸಹಯೋಗದೊಂದಿಗೆ ಭಾರತೀಯ ಪ್ರಯಾಣಿಕರಿಗೆ ಪೂರ್ವ ಅನುಮೋದಿತ ವೀಸಾ ಒದಗಿಸುವ ಸೌಲಭ್ಯಕ್ಕೆ ಚಾಲನೆ ನೀಡಿದೆ. ಇದರನ್ವಯ, ಆರು ತಿಂಗಳ ಮಾನ್ಯತೆ ಹೊಂದಿರುವ ಅಮೆರಿಕಾ, ಯೂರೋಪ್ ಒಕ್ಕೂಟ, ಬ್ರಿಟನ್ ವೀಸಾ ಅಥವಾ ಅಮೆರಿಕಾ ಹಸಿರು ಕಾರ್ಡ್ ಹೊಂದಿರುವ ಭಾರತೀಯ ಪ್ರಯಾಣಿಕರಿಗೆ ಎಮಿರೇಟ್ಸ್ ವಿಮಾನಗಳಲ್ಲಿ ಪ್ರಯಾಣಿಸಲು ಪೂರ್ವ ಅನುಮೋದಿತ ವೀಸಾ ಸೌಲಭ್ಯ ಲಭ್ಯವಾಗಲಿದೆ ಎಂದು simpleflying.com ವರದಿ ಮಾಡಿದೆ.

ಈ ಕ್ರಮವು ಅರ್ಹ ಎಮಿರೇಟ್ಸ್ ಗ್ರಾಹಕರು ವೀಸಾಗಾಗಿ ದುಬೈನಲ್ಲಿ ಸಾಲುಗಟ್ಟಿ ನಿಲ್ಲುವುದರಿಂದ ಮುಕ್ತಿ ನೀಡಲಿದೆ. ಗಮನಾರ್ಹ ಸಂಖ್ಯೆಯ ಭಾರತೀಯರನ್ನು ಹೊಂದಿರುವ ದುಬೈ, ಭಾರತೀಯ ಪ್ರಯಾಣಿಕರ ಪಾಲಿಗೆ ಅತ್ಯಂತ ಬೇಡಿಕೆಯ ಪ್ರವಾಸಿ ತಾಣವಾಗಿದ್ದು, ಭಾರತ ಮತ್ತು ವಿಶ್ವದ ಇನ್ನಿತರ ಭಾಗಗಳಿಂದ ಭಾರತೀಯರ ಸ್ನೇಹಿತರು, ಕುಟುಂಬಗಳು ಹಾಗೂ ಪ್ರಯಾಣಿಕರನ್ನು ಕೈಬೀಸಿ ಕರೆಯುತ್ತದೆ. ಯುಎಇಯ ಅತ್ಯಂತ ಜನನಿಬಿಡ ನಗರವಾದ ದುಬೈಗೆ 2023ರ ಜನವರಿಯಿಂದ ಅಕ್ಟೋಬರ್ ನಡುವೆ ಎರಡು ದಶಲಕ್ಷ ಭಾರತೀಯ ಪ್ರವಾಸಿಗರು ಭೇಟಿ ನೀಡಿದ್ದಾರೆ.

39 ವರ್ಷಗಳಿಂದ ಸೇವೆಯಲ್ಲಿರುವ ಎಮಿರೇಟ್ಸ್ ವಿಮಾನ ಯಾನ ಸಂಸ್ಥೆಯು ಪ್ರತಿ ವಾರ ಈ ದೇಶಕ್ಕೆ ಸೇವೆ ಒದಗಿಸುವ 167 ವಿಮಾನಗಳನ್ನು ಹೊಂದಿದೆ. ಈ ವಿಮಾನ ಯಾನ ಸಂಸ್ಥೆಯು ದಿಲ್ಲಿ, ಮುಂಬೈ, ಚೆನ್ನೈ, ಕೊಚ್ಚಿ, ಕೋಲ್ಕತ್ತಾ, ಅಹಮದಾಬಾದ್, ಬೆಂಗಳೂರು, ಹೈದರಾಬಾದ್ ಹಾಗೂ ತಿರುವನಂತಪುರಂ ಸೇರಿದಂತೆ ಒಟ್ಟು ಒಂಬತ್ತು ಸ್ಥಳಗಳಿಂದ ವಾಯು ಯಾನ ಸೇವೆ ಒದಗಿಸುತ್ತಿದೆ. ಈ ನಗರಗಳಿಂದ ದುಬೈಗೆ ವಿಮಾನ ಸೇವೆ ಒದಗಿಸುವ ಎಮಿರೇಟ್ಸ್, ಅಲ್ಲಿಂದ ವಿಶ್ವದಾದ್ಯಂತ 140 ಸ್ಥಳಗಳಿಗೆ ಸೇವೆ ಒದಗಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News