×
Ad

ರಾಮಮಂದಿರ ನಿರ್ಮಾಣ ಹಾಗೂ ತ್ರಿವಳಿ ತಲಾಖ್ ಕಾನೂನನ್ನು ಹೊಗಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Update: 2024-01-31 15:03 IST

Photo: PTI

ಹೊಸದಿಲ್ಲಿ: ಕಳೆದ ಐದು ವರ್ಷಗಳಲ್ಲಿ ಸರ್ಕಾರವು ಹಲವಾರು ಸಾಧನೆಗಳನ್ನು ಮಾಡಿದ್ದು, ಅವುಗಳಲ್ಲಿ ಭಾರತದ ಚಂದ್ರ ಯಾನ ಯಶಸ್ಸು, ಏಶ್ಯನ್ ಗೇಮ್ಸ್ ನಲ್ಲಿನ ಸಾಧನೆ ಹಾಗೂ ರಾಮಮಂದಿರ ದೇವಾಲಯದ ನಿರ್ಮಾಣ ಸೇರಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ಲಾಘಿಸಿದರು ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇಂದು (ಬುಧವಾರ) ಪ್ರಾರಂಭಗೊಂಡ ಬಜೆಟ್ ಅಧಿವೇಶನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಕಲಾಪವನ್ನುದ್ದೇಶಿಸಿ ಇದೇ ಪ್ರಥಮ ಬಾರಿಗೆ ನೂತನ ಸಂಸತ್ ಭವನದಲ್ಲಿ ಅವರು ಮಾತನಾಡಿದರು.

“ಶತಮಾನಗಳ ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣದ ಕನಸು ಕೈಗೂಡಿದೆ ಎಂದು ಜನರು ತೃಪ್ತರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀತರದ 370ನೇ ವಿಧಿ ಕೂಡಾ ರದ್ದಾಗಬೇಕು ಎಂದು ಜನರು ಬಯಸಿದ್ದರು. ಅದೂ ಕೂಡಾ ಈಗ ಇತಿಹಾಸವಾಗಿದೆ” ಎಂದು ಅವರು ಹೇಳಿದರು.

ಈ ಸಂಸತ್ತು ತ್ರಿವಳಿ ತಲಾಖ್ ವಿರುದ್ಧ ಕಠಿಣ ಕಾನೂನು ರೂಪಿಸಿದೆ ಎಂದು ಅವರು ಪ್ರಶಂಸಿಸಿದರು. ಇದರೊಂದಿಗೆ ಸರ್ಕಾರದ ಹಲವಾರು ಸಾಧನೆಗಳನ್ನು ಅವರು ಪಟ್ಟಿ ಮಾಡಿದರು.

ವಸಾಹತುಶಾಹಿ ಕಾಲದ ಕಾನೂನುಗಳನ್ನು ಹಿಂಪಡೆಯಲಾಗಿದೆ. ನಮ್ಮ ಸರ್ಕಾರ 25 ಕೋಟಿ ಜನರನ್ನು ಬಡತನದಿಂದ ಹೊರತಂದಿದೆ ಎಂದೂ ಮುರ್ಮು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News