×
Ad

ಎಕ್ಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ 10 ಕೋಟಿ ಫಾಲೋವರ್ಸ್!

Update: 2024-07-14 22:31 IST

ನರೇಂದ್ರ ಮೋದಿ | PC : X \ @narendramodi 

ಹೊಸದಿಲ್ಲಿ: ಸಾಮಾಜಿಕ ಜಾಲತಾಣ ಎಕ್ಸ್‌ ನ ಖಾತೆಯಲ್ಲಿ 10 ಕೋಟಿ ಫಾಲೋವರ್‌ ಗಳನ್ನು ಹೊಂದುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲೇ ನಂಬರ್‌ ಒನ್ ಆಗಿದ್ದಾರೆ.

ಭಾರತದಲ್ಲಿ ಎಕ್ಸ್‌ನಲ್ಲಿ ವಿವಿಧ ರಾಜಕಾರಣಿಗಳಿಗೆ ಹೋಲಿಸಿದರೆ ಪ್ರಧಾನಿ ಮೋದಿಗೆ ಹೆಚ್ಚು ಫಾಲೋವರ್‌ ಗಳಿದ್ದಾರೆ. ಕಳೆದ 3 ವರ್ಷಗಳಲ್ಲಿ, ಮೋದಿ ಅವರ ಎಕ್ಸ್ ಖಾತೆಯಲ್ಲಿ ಸುಮಾರು 3 ಕೋಟಿ ಫಾಲೋವರ್‌ ಗಳು ಹೆಚ್ಚಾಗಿದ್ದಾರೆ.

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ 2.6 ಕೋಟಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2.75 ಕೋಟಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ 1.99 ಕೋಟಿ,ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ 74 ಲಕ್ಷ ಫಾಲೋವರ್‌ ಗಳಿದ್ದಾರೆ.

ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ 63 ಲಕ್ಷ, ಅವರ ಪುತ್ರ ತೇಜಸ್ವಿ ಯಾದವ್ 52 ಲಕ್ಷ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ 29 ಲಕ್ಷ ಫಾಲೋವರ್‌ ಗಳನ್ನು ಹೊಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News