×
Ad

ಸಂಸತ್ತಿಗೆ ಮೋದಿ, ಅದಾನಿ ಚಿತ್ರವಿರುವ ಆಕರ್ಷಕ ಬ್ಯಾಗ್ ಧರಿಸಿಕೊಂಡು ಬಂದ ಪ್ರಿಯಾಂಕ: ʼತುಂಬಾ ಚೆನ್ನಾಗಿದೆʼ ಎಂದ ರಾಹುಲ್

Update: 2024-12-10 12:57 IST

ಪ್ರಿಯಾಂಕಾ ಗಾಂಧಿ | PC : X

ಹೊಸದಿಲ್ಲಿ: ಅದಾನಿ ವಿರುದ್ಧ ಯುಎಸ್ ನಲ್ಲಿ ದೋಷಾರೋಪಣೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆ ಪ್ರತಿಪಕ್ಷಗಳ ಸಂಸದರು ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ʼಪ್ರಧಾನಿ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿʼ ಅವರ ಚಿತ್ರವಿರುವ ಆಕರ್ಷಕ ಬ್ಯಾಗ್ ನ್ನು ಧರಿಸಿಕೊಂಡು ಸಂಸತ್ತಿಗೆ ಬಂದಿದ್ದು, ಎಲ್ಲರ ಗಮನ ಸೆಳೆಯುವಂತೆ ಮಾಡಿದೆ.

ಪ್ರಿಯಾಂಕ ಧರಿಸಿರುವ ಆಕರ್ಷಕ ಬ್ಯಾಗ್ ನೋಡಿದ ರಾಹುಲ್ ಗಾಂಧಿ,"ಇದು ತುಂಬಾ ಚೆನ್ನಾಗಿದೆ" ಎಂದು ಹೇಳಿದ್ದಾರೆ. ಆರಂಭದಲ್ಲಿ, ಮೋದಿ-ಅದಾನಿ ಚಿತ್ರವನ್ನು ಒಳಗೊಂಡ ಬ್ಯಾಗ್ ನ ವಿನ್ಯಾಸವನ್ನು ಪರಿಶೀಲಿಸಿದ ರಾಹುಲ್ ಗಾಂಧಿ, ನಂತರ ಬ್ಯಾಗ್ ನ್ನು ತಿರುಗಿಸಿ "ಮೋದಿ ಅದಾನಿ ಭಾಯಿ ಭಾಯಿʼ(Modi Adani Bhai Bhai)ʼ ಎಂದು ಬರೆದಿರುವುದನ್ನು ನೋಡಿ ಇದು ಎಷ್ಟು ಚೆನ್ನಾಗಿದೆ ನೋಡಿ! ಎಂದು ನಗುತ್ತಾ ಹೇಳಿದ್ದಾರೆ. ರಾಹುಲ್ ಈ ವೇಳೆ ಪ್ರಿಯಾಂಕಾಗೆ ಬ್ಯಾಗ್ ಡಿಸೈನರ್ ಬಗ್ಗೆ ಕೇಳಿದ್ದು ಪ್ರಿಯಾಂಕ ನಗುತ್ತಾ ಮುಂದೆ ಸಾಗಿದ್ದಾರೆ.

ನವೆಂಬರ್ 20ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾದ ನಂತರ ಉಭಯ ಸದನಗಳಲ್ಲಿ ಅದಾನಿ ವಿರುದ್ಧದ ದೋಷಾರೋಪಣೆ ಬಗ್ಗೆ ಚರ್ಚೆ ಗೆ ವಿಪಕ್ಷಗಳು ಪಟ್ಟು ಹಿಡಿದಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News