×
Ad

ಜಲ ಜೀವನ್‌ ಮಿಷನ್‌ ಹಗರಣ: ರಾಜಸ್ಥಾನದ 25 ಕಡೆ ಈಡಿ ದಾಳಿ

Update: 2023-11-03 11:17 IST

ಹೊಸದಿಲ್ಲಿ: ಸದ್ಯದಲ್ಲಿಯೇ ವಿಧಾನಸಭಾ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಜಲ ಜೀವನ್‌ ಮಿಷನ್‌ ಯೋಜನೆಯಲ್ಲಿ ನಡೆದಿದೆಯೆನ್ನಲಾದ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಇಂದು ರಾಜ್ಯ ರಾಜಧಾನಿ ಜೈಪುರ್‌ ಹಾಗೂ ದೌಸಾದಲ್ಲಿ 25ಕ್ಕೂ ಅಧಿಕ ಕಡೆಗಳಲ್ಲಿ ದಾಳಿ ನಡೆಸಿದೆ. ಪಿಎಚ್‌ಇ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೋಧ್‌ ಅಗರ್ವಾಲ್‌ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಆರೋಗ್ಯ ಇಲಾಖೆಯ ಹಲವು ಅಧಿಕಾರಿಗಳ ಮೇಲೂ ಜಾರಿ ನಿರ್ದೇಶನಾಲಯ ಕಣ್ಣಿಟ್ಟಿದೆ.

ಶ್ರೀ ಶ್ಯಾಮ್‌ ಟ್ಯೂಬ್‌ವೆಲ್‌ ಕಂಪೆನಿ ಮಾಲಕ ಪದಂಚಂದ್‌ ಜೈನ್‌, ಶ್ರೀ ಗಣಪತಿ ಟ್ಯೂಬ್‌ವೆಲ್‌ ಕಂಪೆನಿ ಮಾಲಕ ಮಹೇಶ್‌ ಮಿತ್ತಲ್‌ ಮತ್ತಿತರರು ಅಕ್ರಮ ಟೆಂಡರ್‌, ಬಿಲ್‌ ಅನುಮೋದನೆಗಳು ಹಾಗೂ ವಿವಿಧ ಪಿಎಚ್‌ಇಡಿ ಯೋಜನೆಗಳ ಅವ್ಯವಹಾರಗಳನ್ನು ಮುಚ್ಚಿ ಹಾಕಲು ಅಧಿಕಾರಿಗಳಿಗೆ ಲಂಚ ನೀಡಿದ್ದಾರೆಂದು ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ಬ್ಯುರೋ ದಾಖಲಿಸಿರುವ ಎಫ್‌ಐಆರ್‌ನಲ್ಲಿನ ಮಾಹಿತಿ ತಿಳಿಸುತ್ತದೆ.

ಪಿಎಚ್‌ಇಡಿ ಗುತ್ತಿಗೆ ಪಡೆಯುವ ಸಲುವಾಗಿ ಆರೋಪಿಗಳು ಹರ್ಯಾಣದಿಂದ ಕದ್ದ ಸರಕುಗಳನ್ನು ಖರೀದಿಸಿದ್ದೇ ಅಲ್ಲದೆ ನಕಲಿ ಕಾಮಗಾರಿ ಪೂರ್ಣ ಪತ್ರಗಳನ್ನು ಐಆರ್‌ಸಿಒಎನ್‌ನಿಂದ ಪಡೆದಿದ್ದರು ಎಂದೂ ಆರೋಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News