ಅಹ್ಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನ : ತನಿಖೆಯ ಹೊಣೆ ಎಎಐಬಿ ಹೆಗಲಿಗೆ
Update: 2025-06-12 19:04 IST
Photo Credit: Vijay Soneji
ಅಹ್ಮದಾಬಾದ್ : ಗುಜರಾತ್‌ನ ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತ ತನಿಖೆಯನ್ನು ʼವಿಮಾನ ಅಪಘಾತ ತನಿಖಾ ಸಂಸ್ಥೆʼ (AAIB) ತನಿಖೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತನವಾದ ಏರ್ ಇಂಡಿಯಾ- 787 ವಿಮಾನದಲ್ಲಿ 12 ಸಿಬ್ಬಂದಿ ಸೇರಿದಂತೆ 242 ಪ್ರಯಾಣಿಕರಿದ್ದರು. ವಿಮಾನ ಪತನದ ಹಿನ್ನೆಲೆ AAIB ಮಹಾನಿರ್ದೇಶಕರು ಸೇರಿದಂತೆ ಇತರ ಅಧಿಕಾರಿಗಳು ಅಹಮದಾಬಾದ್‌ಗೆ ತೆರಳಲಿದ್ದಾರೆ.
ಭಾರತದ ವಾಯು ಪ್ರದೇಶದಲ್ಲಿ ಸಂಭವಿಸುವ ವಿಮಾನ ಅಪಘಾತಗಳ ಬಗ್ಗೆ ಎಎಐಬಿ ತನಿಖೆ ನಡೆಸುತ್ತದೆ. ಇದಲ್ಲದೆ ಸುರಕ್ಷತೆಯನ್ನು ಸುಧಾರಿಸಲು ಕ್ರಮಗಳನ್ನು ಸೂಚಿಸುತ್ತದೆ.