×
Ad

ನೇಪಾಳದಲ್ಲಿ ಪ್ರತಿಭಟನೆ | ಭಾರತ-ನೇಪಾಳ ಗಡಿಯಲ್ಲಿ ಕಟ್ಟೆಚ್ಚರ

Update: 2025-09-09 16:24 IST

PC : PTI 

ಪಣಿಟಾಂಕಿ, ಪಶ್ಚಿಮ ಬಂಗಾಳ: ನೇಪಾಳದಲ್ಲಿ ಸರ್ಕಾರದ ಸಾಮಾಜಿಕ ಮಾಧ್ಯಮ ನಿಷೇಧದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು, ಪಣಿಟಾಂಕಿಯ ಭಾರತ-ನೇಪಾಳ ಗಡಿಯಲ್ಲಿ ತೀವ್ರ ಎಚ್ಚರಿಕೆ ವಹಿಸಲಾಗಿದೆ.

ಗಡಿಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟು, ಹೊಸ ಪೊಲೀಸ್ ಠಾಣೆ ಸ್ಥಾಪಿಸಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಎಸ್‌ಪಿ ಪ್ರವೀಣ್ ಪ್ರಕಾಶ್ ತಿಳಿಸಿದ್ದಾರೆ.

ಅಧಿಕಾರಿಗಳು ಗಡಿಯಾಚೆಗಿನ ಚಲನವಲನಗಳು ಮತ್ತು ಬೆಳವಣಿಗೆಗಳ ಮೇಲೆ ನಿರಂತರವಾಗಿ ನಿಗಾ ಇಟ್ಟಿದ್ದಾರೆ. ಯಾವುದೇ ಅಸಾಮಾನ್ಯ ಘಟನೆಯನ್ನು ತಡೆಯಲು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News