×
Ad

ಆ್ಯಪಲ್‌ ಐಫೋನ್ 17 ಬಿಡುಗಡೆ | ಮುಂಬೈ ಆ್ಯಪಲ್‌ ಸ್ಟೋರ್ ಹೊರಗೆ ಅಭಿಮಾನಿಗಳ ಘರ್ಷಣೆ

Update: 2025-09-19 12:45 IST

Screengrab:X/@PTI_News

ಮುಂಬೈ: ಆ್ಯಪಲ್‌ ಕಂಪೆನಿಯ ಇತ್ತೀಚಿನ ಐಫೋನ್ 17 ಸರಣಿ ಶುಕ್ರವಾರ ಭಾರತದಲ್ಲಿ ಬಿಡುಗಡೆಯಾದ ಬೆನ್ನಲ್ಲೇ, ಮುಂಬೈ ಹಾಗೂ ದಿಲ್ಲಿಯ ಆ್ಯಪಲ್‌ ಸ್ಟೋರ್‌ಗಳ ಹೊರಗೆ ಭಾರೀ ಜನಸಂದಣಿ ಕಂಡುಬಂತು. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ಶಾಖೆಯಲ್ಲಿ ಸಾಲಿನಲ್ಲಿ ನಿಂತಿದ್ದ ಕೆಲ ಅಭಿಮಾನಿಗಳ ನಡುವೆ ವಾಗ್ವಾದ ತೀವ್ರಗೊಂಡು ಘರ್ಷಣೆ ನಡೆಯಿತು.

ಪಿಟಿಐ ಸುದ್ದಿ ಸಂಸ್ಥೆ ಹಂಚಿಕೊಂಡ ವೀಡಿಯೊದಲ್ಲಿ ಇಬ್ಬರು ವ್ಯಕ್ತಿಗಳು ಪರಸ್ಪರ ಹಲ್ಲೆ ನಡೆಸುತ್ತಿರುವುದು, ಇತರರು ಮಧ್ಯಪ್ರವೇಶಿಸಲು ಯತ್ನಿಸಿದರೂ ಫಲಕಾರಿಯಾಗದ ದೃಶ್ಯಗಳು ದಾಖಲಾಗಿವೆ. ಬಳಿಕ ಭದ್ರತಾ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ವಾಗ್ವಾದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಘರ್ಷಣೆಯ ಘಟನೆಯ ಹೊರತಾಗಿಯೂ, ಹೊಸ ಮಾದರಿಯನ್ನು ಪಡೆದ ಗ್ರಾಹಕರು ತಮ್ಮ ಸಂತೋಷವನ್ನು ಹಂಚಿಕೊಂಡರು. 82,900 ರೂಪಾಯಿಯಿಂದ 2,29,900 ರೂಪಾಯಿಯವರೆಗಿನ ಬೆಲೆಯ ಐಫೋನ್ 17 ಸರಣಿ ಸೆಪ್ಟೆಂಬರ್ 19ರಿಂದ ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಯಿತು.

ಮುಂಬೈನ ಮೊದಲ ಗ್ರಾಹಕರಲ್ಲೊಬ್ಬರಾದ ಅಮನ್ ಮೆಮನ್,“ನಾನು ನನ್ನ ಕುಟುಂಬಕ್ಕಾಗಿ ಮೂರು ಐಫೋನ್‌ಗಳನ್ನು ಖರೀದಿಸಿದ್ದೇನೆ. ಈ ವರ್ಷದ ವಿನ್ಯಾಸ ಮತ್ತು ಬಣ್ಣ ನನಗೆ ತುಂಬಾ ಇಷ್ಟವಾಗಿದೆ. ಬೆಳಿಗ್ಗೆ 3 ಗಂಟೆಯಿಂದಲೇ ಸಾಲಿನಲ್ಲಿ ನಿಂತಿದ್ದೆ. ಕಳೆದ ಆರು ತಿಂಗಳಿನಿಂದ ಈ ಫೋನ್‌ಗಾಗಿ ಕಾಯುತ್ತಿದ್ದೆ" ಎಂದರು.

ಮತ್ತೊಬ್ಬ ಗ್ರಾಹಕ ಇರ್ಫಾನ್, “ನಾನು ಕಿತ್ತಳೆ ಬಣ್ಣದ ಐಫೋನ್ 17 ಪ್ರೊ ಮ್ಯಾಕ್ಸ್ ಖರೀದಿಸಲು ರಾತ್ರಿ 8 ಗಂಟೆಯಿಂದ ಕಾಯುತ್ತಿದ್ದೇನೆ. ಈ ಬಾರಿ ಕ್ಯಾಮೆರಾ ಹಾಗೂ ಬ್ಯಾಟರಿ ಉತ್ತಮಗೊಂಡಿದ್ದು, ಡಿಸೈನ್ ಕೂಡ ವಿಭಿನ್ನವಾಗಿದೆ", ಎಂದು ಸಂತಸ ವ್ಯಕ್ತಪಡಿಸಿದರು.

ದಿಲ್ಲಿಯ ಸಾಕೇತ್ ಆಪಲ್ ಸ್ಟೋರ್‌ ಮುಂದೆಯೂ ಸರತಿ ಸಾಲು ಕಂಡುಬಂದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News