ಪುಣೆ: ಮಹಿಳಾ ವಿಲಾಗರ್ ಗೆ ಕಿರುಕುಳ ನೀಡಿದ ಕಿಡಿಗೇಡಿಯ ಬಂಧನ
ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ದಕ್ಷಿಣ ಕೊರಿಯದ ಮಹಿಳಾ ವಿಲಾಗರ್ ಒಬ್ಬರಿಗೆ ಕಿರುಕುಳ ನೀಡಿದ ಯುವಕನೊಬ್ಬನನ್ನು ಬಂಧಿಸಲಾಗಿದೆಯೆಂದು ಇಂಡಿಯಾಟುಡೇ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.
ಪಿಂಪ್ರಿ-ಚಿಂಚವಾಡ ಪ್ರದೇಶದಲ್ಲಿರುವ ರಾವೆಟ್ ಪ್ರದೇಶದಲ್ಲಿ ವಿಡಿಯೋವೊದಂರ ಚಿತ್ರೀಕರಣದಲ್ಲಿ ತೊಡಗಿದ್ದ ದಕ್ಷಿಣ ಕೊರಿಯದ ಮಹಿಳಾ ವಿಲಾಗರ್ ಗೆ ಯುವಕನೊಬ್ಬ ಕಿರುಕುಳ ನೀಡಿದ್ದನೆನ್ನಲಾಗಿದೆ. ನವೆಂಬರ್ನಲ್ಲಿ ಈ ಘಟನೆ ನಡೆದಿತ್ತು. ಆದರೆ ಮಹಿಳಾ ವಿಲಾಗರ್ ಡಿಸೆಂಬರ್ 12ರಂದು ಕಿರುಕುಳದ ವೀಡಿಯೊವನ್ನು ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಿದ್ದಿಂದ ಬೆಳಕಿಗೆ ಬಂದಿತು.
ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬಳಿಕ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆಂದು ಪುಣೆಯ ಸಹಾಯಕ ಪೊಲೀಸ್ ಆಯುಕ್ತ ಸತೀಶ ಮಾನೆ ತಿಳಿಸಿದ್ದಾರೆ.
ಪುಣೆಯ ಪಿಂಪ್ರಿ-ಚಿಂಚವಾಡಿಯ ರಾವೆಟ್ ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿಮಾಲಕರು ಹಾಗೂ ಗ್ರಾಹಕರೊಂದಿಗೆ ಸಂಭಾಷಣೆ ನಡೆಸುತ್ತಿದ್ದ ವಿಲಾಗರ್ ನ ಕೊರಳಿನ ಸುತ್ತ ಕೈಯನ್ನು ಬಳಸಿಕೊಂಡು, ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದನೆನ್ನಲಾಗಿದೆ.
‘‘ಆತ ನಿಜಕ್ಕೂ ತಬ್ಬಿಕೊಳ್ಳಲು ಮುಂದಾಗಿದ್ದ. ಇಲ್ಲಿಂದ ಪಾರಾದಾರೆ ಸಾಕು’’ ಎಂದು ವಿಲಾಗರ್ ವಿಡಿಯೊದಲ್ಲಿ ಹೇಳುತ್ತಿರುವುದು ದಾಖಲಾಗಿದೆ.
2022ರ ನವೆಂಬರ್ನಲ್ಲಿ ಮುಂಬೈಯಲ್ಲಿ ದಕ್ಷಿಣ ಕೊರಿಯದ ಇನ್ನೋರ್ವ ವಿಲಾಗರ್ ಗೆ ಕಿರುಕುಳ ನೀಡಿದ ಹಾಗೂ ಆಕೆಯನ್ನು ಹಿಂಬಾಲಿಸಿದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದರು.