×
Ad

ಪಂಜಾಬ್ | ರೈಲಿನಲ್ಲಿ ಸ್ಫೋಟ ನಾಲ್ವರಿಗೆ ಗಾಯ

Update: 2024-11-03 21:46 IST

ಸಾಂದರ್ಭಿಕ ಚಿತ್ರ (PTI)

ಚಂಡಿಗಢ : ಪಂಜಾಬ್‌ನ ಫತೇಗಢ ಸಾಹಿಬ್ ಜಿಲ್ಲೆಯ ಸರಹಿಂದ್ ರೈಲು ನಿಲ್ದಾಣದ ಸಮೀಪ ಹಾವರ ಮೈಲ್‌ ನ ಜನರಲ್ ಬೋಗಿಯಲ್ಲಿ ಸ್ಫೋಟ ಸಂಭವಿಸಿ ನಾಲ್ವರು ಗಾಯಗೊಂಡಿದ್ದಾರೆ.

ಈ ಘಟನೆ ರೈಲು ಅಮೃತಸರದಿಂದ ಹಾವರಕ್ಕೆ ಸಂಚರಿಸುತ್ತಿದ್ದ ಸಂದರ್ಭ ಶನಿವಾರ ರಾತ್ರಿ 10.30ಕ್ಕೆ ಸಂಭವಿಸಿದೆ.

ಪಟಾಕಿ ತುಂಬಿದ್ದ ಪ್ಲಾಸ್ಟಿಕ್ ಬಕೆಟ್‌ನಲ್ಲಿ ಸ್ಫೋಟ ಸಂಭವಿಸಿತು ಎಂದು ಸರಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರು ಮಹಿಳೆ ಕೂಡ ಸೇರಿದ್ದಾರೆ.

‘‘ರೈಲಿನ ಜನರಲ್ ಬೋಗಿಯಲ್ಲಿ ಪಟಾಕಿ ತುಂಬಿದ್ದ ಪ್ಲಾಸ್ಟಿಕ್ ಬಕೆಟ್‌ನಲ್ಲಿ ಸ್ಫೋಟ ಸಂಭವಿಸಿತು’’ ಎಂದು ಜಿಆರ್‌ಪಿಯ ಉಪ ಪೊಲೀಸ್ ಅಧೀಕ್ಷಕ ಜಗಮೋಹನ್ ಸಿಂಗ್ ಹೇಳಿದ್ದಾರೆ.

ಪೊಲೀಸರು ಕೂಲಂಕಷ ತನಿಖೆ ನಡೆಸುತ್ತಿದ್ದಾರೆ. ಮಾದರಿಗಳನ್ನು ವಿಶ್ಲೇಷಣೆಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ಘಟನೆಯ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News