×
Ad

ಪಂಜಾಬ್: ಕಸದ ರಾಶಿಯಲ್ಲಿ ಏಳು ರಾಕೆಟ್ ಶೆಲ್‌ಗಳು ಪತ್ತೆ!

Update: 2025-02-10 20:15 IST

PC : X 

ಚಂಡಿಗಡ: ಪಂಜಾಬಿನ ಪಟಿಯಾಳಾ ಜಿಲ್ಲೆಯ ರಾಜಪುರ ರೋಡ್‌ನ ಶಾಲೆಯೊಂದರ ಬಳಿ ಕಸದ ರಾಶಿಯಲ್ಲಿ ಸೋಮವಾರ ಏಳು ರಾಕೆಟ್ ಶೆಲ್‌ಗಳು ಪತ್ತೆಯಾಗಿವೆ.

ಈ ಶೆಲ್‌ಗಳಲ್ಲಿ ಯಾವುದೇ ಸ್ಫೋಟಕ ಇರಲಿಲ್ಲ,ಕಸದ ರಾಶಿಯಲ್ಲಿದ್ದ ಚೀಲವೊಂದರಲ್ಲಿ ಈ ಶೆಲ್‌ಗಳು ಪತ್ತೆಯಾಗಿವೆ ಎಂದು ಡಿಐಜಿ ಮಂದೀಪ ಸಿಂಗ್ ಸಿಧು ತಿಳಿಸಿದರು.

ಹೆಚ್ಚಿನ ಮಾಹಿತಿಗಳನ್ನು ಹಂಚಿಕೊಂಡ ಪಟಿಯಾಳಾದ ಎಸ್‌ಎಸ್‌ಪಿ ನಾನಕ್ ಸಿಂಗ್ ಅವರು,‘ದಾರಿಹೋಕರು ನೀಡಿದ್ದ ಮಾಹಿತಿಯ ಮೇರೆಗೆ ಪೋಲಿಸ್ ತಂಡವೊಂದು ಸ್ಥಳಕ್ಕೆ ಧಾವಿಸಿತ್ತು. ಬಾಂಬ್ ನಿಗ್ರಹ ದಳವೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಯಾರೋ ಗುಜರಿ ವ್ಯಾಪಾರಿ ಈ ಶೆಲ್‌ಗಳನ್ನು ಕಸದ ರಾಶಿಯಲ್ಲಿ ಎಸೆದಿರಬಹುದು ಎಂದು ತೋರುತ್ತಿದೆ. ಆದಾಗ್ಯೂ ಪೋಲಿಸರು ಎಲ್ಲ ಸಾಧ್ಯತೆಗಳನ್ನು ಗಣನೆಗೆ ತೆಗದುಕೊಂಡು ತನಿಖೆ ನಡೆಸಲಿದ್ದಾರೆ. ಸದ್ಯಕ್ಕೆ ನಾವು ಯಾವುದನ್ನೂ ತಳ್ಳಿಹಾಕುತ್ತಿಲ್ಲ ’ಎಂದರು.

ತನಿಖೆಯಲ್ಲಿ ಸೇನೆಯ ಅಧಿಕಾರಿಗಳೂ ಕೈಜೋಡಿಸಲಿದ್ದಾರೆ. ಸೇನೆಯ ತಜ್ಞರು ಈ ಶೆಲ್‌ಗಳು ಎಷ್ಟು ಹಳೆಯವು ಮತ್ತು ಇಲ್ಲಿಗೆ ತಲುಪಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸಲಿದ್ದಾರೆ ಎಂದೂ ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News