×
Ad

ಪಂಜಾಬ್ | ನದಿಯಲ್ಲಿ ಕೊಚ್ಚಿ ಹೋದ ಎಸ್‌ ಯು ವಿ ವಾಹನ ; ಒಂದೇ ಕುಟುಂಬದ 7 ಮಂದಿ ಮೃತ್ಯು, ಮೂವರು ನಾಪತ್ತೆ

Update: 2024-08-11 22:17 IST

PC : NDTV

ಹೋಶಿಯಾರ್‌ ಪುರ : ಪಂಜಾಬ್‌ ನ ಜೈಜೋನ್ ಚೋ ನದಿ ಪ್ರವಾಹದಲ್ಲಿ ರವಿವಾರ ಎಸ್‌ ಯು ವಿ ವಾಹನವೊಂದು ಕೊಚ್ಚಿಕೊಂಡು ಹೋಗಿದ್ದು, ಅದರಲ್ಲಿದ್ದ 7 ಮಂದಿ ಮೃತಪಟ್ಟಿದ್ದಾರೆ ಹಾಗೂ 3 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿವಾಹ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಚಾಲಕ ಸೇರಿದಂತೆ 11 ಮಂದಿಯ ತಂಡ ಎಸ್‌ ಯು ವಿ ವಾಹನದಲ್ಲಿ ಹಿಮಾಚಲಪ್ರದೇಶದ ಉನಾ ಜಿಲ್ಲೆಯ ಮೆಹತಾಪುರ ಸಮೀಪದ ದೆಹ್ರಾದಿಂದ ಪಂಜಾಬ್‌ ನ ಎಸ್‌ ಬಿ ಎಸ್ ನಗರ ಜಿಲ್ಲೆಯ ಮೆಹ್ರೋವಲ್ ಗ್ರಾಮಕ್ಕೆ ತೆರಳುತ್ತಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಭಾರೀ ಮಳೆ ಸುರಿದಿರುವುದರಿಂದ ಜೈಜೋನ್ ಚೋ ನದಿ ಉಕ್ಕಿ ಹರಿಯುತ್ತಿತ್ತು. ನದಿಯನ್ನು ದಾಟದಂತೆ ಸ್ಥಳೀಯರು ಚಾಲಕನಿಗೆ ಎಚ್ಚರಿಕೆ ನೀಡಿದ್ದರು. ಆದರೆ, ಆತ ಅವರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಮುಂದುವರಿದಿದ್ದ. ಇದುದರಿಂದ ಎಸ್‌ ಯು ವಿ ವಾಹನ ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು ಎಂದು ಅವರು ಹೇಳಿದ್ದಾರೆ.

ವಾನಹದಲ್ಲಿದ್ದ ಒಬ್ಬರನ್ನು ರಕ್ಷಿಸಲು ಸ್ಥಳೀಯರು ಸಫಲರಾಗಿದ್ದಾರೆ. 7 ಮಂದಿಯ ಮೃತದೇಹಗಳನ್ನು ನದಿಯಿಂದ ಮೇಲೆತ್ತಲಾಗಿದೆ. ಮೂವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಉಪ ಅಧೀಕ್ಷಕ ಜಾಂಗೀರ್ ಸಿಂಗ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News