×
Ad

ರಾಗಿ ಇಡ್ಲಿಯಿಂದ ಗ್ರಿಲ್ಡ್ ಫಿಷ್‌ ವರೆಗೆ: ಸಂಸತ್ ಕ್ಯಾಂಟೀನ್‌ ನಲ್ಲಿ ಆರೋಗ್ಯಕರ ಹೊಸ ಮೆನು

Update: 2025-07-16 20:44 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜು.16: ರಾಗಿ ಇಡ್ಲಿ,ಜೋಳದ ಉಪ್ಪಿಟ್ಟಿನಿಂದ ಹಿಡಿದು ಮೂಂಗ್ ದಾಲ್ ಚಿಲ್ಲಾ ಮತ್ತು ತರಕಾರಿಗಳೊಂದಿಗೆ ಗ್ರಿಲ್ಡ್ ಫಿಷ್‌ ವರೆಗೆ ವಿವಿಧ ಖಾದ್ಯಗಳನ್ನೊಂಡಿರುವ ಸಂಸತ್ ಕ್ಯಾಂಟೀನಿನ ನೂತನ ‘ಆರೋಗ್ಯಕರ ಮೆನು’ ಸಂಸದರು, ಅಧಿಕಾರಿಗಳು ಮತ್ತು ಸಂಸತ್ ಭವನಕ್ಕೆ ಭೇಟಿ ನಿಡುವವರಿಗಾಗಿ ಪೌಷ್ಟಿಕಾಂಶಗಳೊಂದಿಗೆ ಆಹಾರವನ್ನು ಉಣಬಡಿಸುವ ಉದ್ದೇಶವನ್ನು ಹೊಂದಿದೆ.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಸೂಚನೆಯಂತೆ ರುಚಿಯನ್ನು ಉಳಿಸಿಕೊಂಡು ಆರೋಗ್ಯಕ್ಕೆ ಪೂರಕವಾಗಿರುವ ನೂತನ ಮೆನು ಅಧಿವೇಶನಗಳ ಸಂದರ್ಭ ಸುದೀರ್ಘ ಕಾಲ ಚರ್ಚೆಗಳಲ್ಲಿ ತೊಡಗಿಕೊಳ್ಳುವ ಸಂಸದರು ಮತ್ತು ಅಧಿಕಾರಿಗಳಿಗೆ ಪೌಷ್ಟಿಕ ಆಹಾರವನ್ನು ಒದಗಿಸಲಿದೆ.

ಈ ವಿಶೇಷ ಮೆನು ಅಧಿಕಾರದ ಮೊಗಸಾಲೆಗಳಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಸಂಪ್ರದಾಯ ಮತ್ತು ಪೋಷಕಾಂಷ ಎರಡನ್ನೂ ಮಿಶ್ರಗೊಳಿಸಿದೆ.

ರುಚಿಕರವಾದ ಮೇಲೋಗರಗಳು, ವೈವಿಧ್ಯಮಯ ಥಾಲಿಗಳೊಂದಿಗೆ ಸಿರಿಧಾನ್ಯ ಆಧಾರಿತ ಊಟ, ನಾರಿನಿಂದ ಸಮೃದ್ಧ ಸಲಾಡ್‌ಗಳು, ಪ್ರೋಟಿನ್‌ ಭರಿತ ಸೂಪ್‌ ಗಳನ್ನೂ ಮೆನು ಒಳಗೊಂಡಿದೆ.

ಪ್ರತಿಯೊಂದೂ ಖಾದ್ಯವನ್ನು ಕಡಿಮೆ ಕಾರ್ಬೊಹೈಡ್ರೇಟ್‌ಗಳು, ಸೋಡಿಯಂ ಮತ್ತು ಕ್ಯಾಲರಿಗಳು ಹಾಗೂ ಹೆಚ್ಚಿನ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುವಂತೆ ಸಿದ್ಧಪಡಿಸಲಾಗುತ್ತದೆ. ಮೆನುವಿನಲ್ಲಿ ಪ್ರತಿಯೊಂದೂ ಖಾದ್ಯದ ಮುಂದೆ ಅದರಲ್ಲಿರುವ ಕ್ಯಾಲರಿಗಳ ಸಂಖ್ಯೆಯನ್ನು ಉಲ್ಲೇಖಿಸಲಾಗಿದೆ. ಸಿರಿಧಾನ್ಯಗಳು ಮೆನುವಿನಲ್ಲಿ ಆದ್ಯತೆಯನ್ನು ಪಡೆದಿವೆ. ‘ಚನಾ ಚಾಟ್’ ಮತ್ತು ‘ಮೂಂಗ್ ದಾಲ್ ಚಿಲ್ಲಾ’ದಂತಹ ಜನಪ್ರಿಯ ಭಾರತೀಯ ಆಹಾರಗಳೂ ಮೆನುವಿನಲ್ಲಿ ಸ್ಥಾನ ಪಡೆದಿವೆ.

ಮಾಂಸಾಹಾರವನ್ನು ಇಷ್ಟ ಪಡುವವರಿಗಾಗಿ ತರಕಾರಿಗಳೊಂದಿಗೆ ಗ್ರಿಲ್ಡ್ ಚಿಕನ್ ಮತ್ತು ಗ್ರಿಲ್ಡ್ ಫಿಷ್ ಲಭ್ಯವಿವೆ.

ಪಾನೀಯಗಳ ವಿಭಾಗದಲ್ಲಿ ಗ್ರೀನ್ ಮತ್ತು ಹರ್ಬಲ್ ಚಹಾಗಳೊಂದಿಗೆ ಸಕ್ಕರೆ ಭರಿತ ಸೋಡಾ ಮತ್ತು ಸಾಂಪ್ರದಾಯಿಕ ಸಿಹಿ ಪಾನೀಯಗಳ ಬದಲು ‘ಮಸಾಲಾ ಸತ್ತು’ ಮತ್ತು ‘ಮ್ಯಾಂಗೋ ಪನ್ನಾ’ಸ್ಥಾನ ಪಡೆದಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News