×
Ad

ದೀಪಾವಳಿ | ದಿಲ್ಲಿಯ ಬೇಕರಿ ಅಂಗಡಿಯಲ್ಲಿ ಲಡ್ಡು ತಯಾರಿಗೆ ಪ್ರಯತ್ನಿಸಿದ ರಾಹುಲ್‌ ಗಾಂಧಿ

Update: 2025-10-20 21:32 IST

 ರಾಹುಲ್ ಗಾಂಧಿ | Pc : PTI

ಹೊಸದಿಲ್ಲಿ,ಅ.20: ಸೋಮವಾರ ಎಕ್ಸ್ ಪೋಸ್ಟ್‌ನಲ್ಲಿ ಜನರಿಗೆ ದೀಪಾವಳಿ ಶುಭಾಶಯಗಳನ್ನು ಕೋರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹಳೆ ದಿಲ್ಲಿಯ ಪ್ರಸಿದ್ಧ ಘಂಟೆವಾಲಾ ಸ್ವೀಟ್ ಶಾಪ್‌ನಲ್ಲಿ ತಾನು ‘ಇಮರ್ತಿ(ಜಹಾಂಗೀರ್)’ ಮತ್ತು ‘ಬೇಸನ್ ಲಡ್ಡು’ ತಯಾರಿಸಲು ಪ್ರಯತ್ನಿಸಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ದೀಪಾವಳಿಯ ನಿಜವಾದ ಮಾಧುರ್ಯ ‘ಥಾಲಿ’ಯಲ್ಲಿ ಮಾತ್ರವಲ್ಲ,ಅದು ಸಂಬಂಧಗಳು ಮತ್ತು ಸಮುದಾಯದಲ್ಲಿಯೂ ಇದೆ ಎಂದು ಅವರು ಹೇಳಿದ್ದಾರೆ.

ಶತಮಾನಗಳಷ್ಟು ಹಳೆಯದಾದ ಈ ಅಂಗಡಿಯಲ್ಲಿ ಸಿಹಿಯ ಮಾಧುರ್ಯ ಯಾವಾಗಲೂ ಒಂದೇ ಆಗಿದೆ: ಶುದ್ಧ, ಸಾಂಪ್ರದಾಯಿಕ ಮತ್ತು ಹೃದಯಸ್ಪರ್ಶಿ ಎಂದು ಬರೆದಿರುವ ರಾಹುಲ್, ನೀವು ನಿಮ್ಮ ದೀಪಾವಳಿಯನ್ನು ಹೇಗೆ ಆಚರಿಸುತ್ತಿದ್ದೀರಿ ಮತ್ತು ಅದನ್ನು ವಿಶೇಷವಾಗಿಸುತ್ತಿದ್ದೀರಿ, ಹೇಳಿ ಎಂದು ಜನರನ್ನು ಕೋರಿದ್ದಾರೆ.

ದೇಶದ ಜನರಿಗೆ ದೀಪಾವಳಿಯ ಶುಭಾಶಯಗಳನ್ನು ಕೋರಿರುವ ಅವರು,ಭಾರತವು ಸಂತೋಷದ ದೀಪಗಳಿಂದ ಬೆಳಗಲಿ. ಪ್ರತಿಯೊಂದೂ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಪ್ರೀತಿಯ ಬೆಳಕು ಹರಡಲಿ ಎಂದು ಹೇಳಿದ್ದಾರೆ.

ಅಂಗಡಿಯ ಮಾಲಿಕರು, ‘ನಾವು ನಿಮ್ಮ ಅಜ್ಜಿ, ತಂದೆ ಮತ್ತು ಕುಟುಂಬದ ಇತರ ಸದಸ್ಯರಿಗೆ ಸಿಹಿತಿಂಡಿಗಳನ್ನು ಒದಗಿಸಿದ್ದೇವೆ. ಈಗ ನಿಮ್ಮ ಮದುವೆಗೆ ಸಿಹಿತಿಂಡಿಗಳನ್ನು ಪೂರೈಸಲು ಕಾಯುತ್ತಿದ್ದೇವೆ’ ಎಂದು ಹೇಳಿದ್ದನ್ನು ಮತ್ತು ಪ್ರತಿಯಾಗಿ ರಾಹುಲ್ ಮುಗುಳ್ನಕ್ಕಿದ್ದನ್ನು ವೀಡಿಯೊ ತೋರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News