×
Ad

ಸಂಸತ್ತಿನಲ್ಲಿ ವಿಪಕ್ಷಗಳಿಂದ ವಿಭಿನ್ನ ಪ್ರತಿಭಟನೆ: ರಾಜನಾಥ್ ಸಿಂಗ್ ಗೆ ಗುಲಾಬಿ, ತಿರಂಗ ನೀಡಿದ ರಾಹುಲ್ ಗಾಂಧಿ

Update: 2024-12-11 12:14 IST

Screengrab: X/@ani

ಹೊಸದಿಲ್ಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾದಾಗಿನಿಂದ ಅದಾನಿ ವಿರುದ್ಧದ ದೋಷಾರೋಪಣೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಒತ್ತಾಯಿಸಿ ವಿಪಕ್ಷಗಳ ಸಂಸದರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಬುಧವಾರ ಸಂಸತ್ತಿನ ಆವರಣದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಗುಲಾಬಿ ಹೂವು ಮತ್ತು ತಿರಂಗವನ್ನು ನೀಡಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

ಮಾಸ್ಕ್, ಟೀ ಶರ್ಟ್ ಗಳು ಮತ್ತು ಬ್ಯಾಗ್ ಗಳ ನಂತರ ಕಾಂಗ್ರೆಸ್ ಸಂಸದರು ಎನ್ ಡಿಎ ಸಂಸದರಿಗೆ ಗುಲಾಬಿ ಹೂವುಗಳು ಮತ್ತು ರಾಷ್ಟ್ರಧ್ವಜವನ್ನು ನೀಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

ಹೂವುಗಳನ್ನು ಹಂಚುತ್ತಿದ್ದಾಗ, ವಿರೋಧ ಪಕ್ಷದ ಸಂಸದರು ʼದೇಶವನ್ನು ಮಾರಾಟ ಮಾಡಲು ಬಿಡಬೇಡಿʼ (ದೇಶ್ ಕೋ ಮತ್ ಬಿಕ್ನೆ ದೋ) ಎಂಬ ಫಲಕಗಳನ್ನು ಹಿಡಿದುಕೊಂಡಿದ್ದರು.

ʼನಾವು ರಾಷ್ಟ್ರಧ್ವಜವನ್ನು ವಿತರಿಸಿ, ದೇಶವನ್ನು ಮಾರಾಟ ಮಾಡದೆ ಮುಂದಕ್ಕೆ ಕೊಂಡೊಯ್ಯುವಂತೆ ವಿನಂತಿಸಿದ್ದೇವೆ. ದುರದೃಷ್ಟವಶಾತ್, ಅದಾನಿ ದೇಶವನ್ನು ನಡೆಸುತ್ತಿರುವುದನ್ನು ನಾವು ನೋಡುತ್ತೇವೆ. ಎಲ್ಲವನ್ನೂ ಅವರ ಕೈಗೆ ನೀಡಲಾಗುತ್ತಿದೆ ಮತ್ತು ಬಡವರ ಧ್ವನಿಯನ್ನು ಮೌನಗೊಳಿಸಲಾಗುತ್ತಿದೆʼ ಎಂದು ಕಾಂಗ್ರೆಸ್ ಸಂಸದೆ ವರ್ಷಾ ಗಾಯಕ್ವಾಡ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News